ಸಾರಾಂಶ
ಸಿನಿವಾರ್ತೆ
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ‘ಜೈ ಭೀಮ್’ ಚಿತ್ರದ ಖ್ಯಾತಿಯ ನಿರ್ದೇಶಕ ಜ್ಞಾನವೇಲು ಕಾಂಬಿನೇಶನ್‌ನ ‘ವೆಟ್ಟೈಯಾನ್’ ಸಿನಿಮಾ ಇಂದು (ಅ.10) ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ರಜನಿಕಾಂತ್ ಅವರ ಜತೆಗೆ ಬಿಗ್‌ಬಿ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಸೇರಿದಂತೆ ಕಲಾವಿದರ ದೊಡ್ಡ ದಂಡೇ ಇದೆ. ವಿಶೇಷ ಎಂದರೆ ಈ ದೊಡ್ಡ ಬಜೆಟ್ ಚಿತ್ರದಲ್ಲಿ ಕನ್ನಡಿಗ ದುನಿಯಾ ಕಿಶೋರ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರಜನಿಕಾಂತ್ ಅವರೊಂದಿಗೆ ‘ಕಾಲಾ’, ‘ಜೈಲರ್’ ಚಿತ್ರದಲ್ಲೂ ಕಿಶೋರ್ ನಟಿಸಿದ್ದರು.
ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಜತೆಗೆ ಕನ್ನಡಕ್ಕೂ ಡಬ್ ಆಗಿರುವ ಈ ಚಿತ್ರದ ‘ಮನಸಿಲಾಯೋ’ ಹಾಡು ಟ್ರೆಂಡಿಂಗ್ ಆಗಿದ್ದು, ಮಂಜು ವಾರಿಯರ್ ಹಾಗೂ ರಜನಿಕಾಂತ್ ಡ್ಯಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಹಲವು ಕಡೆ ಇಂದು ಬೆಳಗ್ಗೆ 4.5ಕ್ಕೆ ಮೊದಲ ಶೋ ಪ್ರದರ್ಶನ ಆಗಿದೆ. ಉಳಿದಂತೆ ಬಹುತೇಕ ಕಡೆ ಬೆಳಗ್ಗೆ 6.30ರಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ.