ಸಾರಾಂಶ
ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಪಾರ್ಟಿ ಹಾಡು ಬಿಡುಗಡೆ ಆಗಿದೆ.
ಸಿನಿವಾರ್ತೆ
ಚಂದನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಸ್ಟೂಡೆಂಟ್ ಪಾರ್ಟಿ ಹಾಡು ಬಿಡುಗಡೆ ಆಗಿದೆ. ಬಹದ್ದೂರ್ ಚೇತನ್ ಬರೆದಿರುವ ಹಾಡು ಇದಾಗಿದೆ. ಹಾಡಿಗೆ ಚಂದನ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ.
ಮನೋಜ್ ವಿವಾನ್, ಮನಸ್ವಿ, ಭಾವನಾ ಅಪ್ಪು, ಅಮರ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ನಿರ್ದೇಶಕ ಅರುಣ್ ಅಮುಕ್ತ, ‘ಚಂದನ್ ಶೆಟ್ಟಿ ಅವರ ಎಲ್ಲಾ ಹಾಡುಗಳಂತೆಯೇ ಈ ಹಾಡು ಕೂಡ ಹಿಟ್ ಆಗಲಿದೆ. ವಿದ್ಯಾರ್ಥಿಗಳು ಯಾವ ಯಾವ ಕಾರಣಗಳಿಗೆ ಪಾರ್ಟಿ ಮಾಡುತ್ತಾರೆ ಎಂಬುದರ ಮೇಲೆ ಮೂಡಿ ಬಂದಿರುವ ಹಾಡು ಇದು’ ಎಂದರು.
ಸುಬ್ರಮಣ್ಯ ಕುಕ್ಕೆ ಹಾಗೂ ಎ ಸಿ ಶಿವಲಿಂಗೇಗೌಡ ನಿರ್ಮಾಣ ಮಾಡಿದ್ದಾರೆ. ಚಂದನ್ ಶೆಟ್ಟಿ, ‘ಸಿನಿಮಾ ಬಿಡುಗಡೆ ಹಂತಕ್ಕೆ ಬರುತ್ತಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ನಾನು ಈ ಚಿತ್ರದಲ್ಲಿ ಮೂರು ರೀತಿಯ ಪಾತ್ರ ಮಾಡಿದ್ದೇನೆ’ ಎಂದರು.