ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
ಸಿನಿವಾರ್ತೆ : ರ್‍ಯಾಪರ್ ಚಂದನ್ ಶಟ್ಟಿ ನಾಯಕನಾಗಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಕನ್ನಡ, ತೆಲುಗು, ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ನಿರ್ದೇಶಿಸಿರುವ ಅರುಣ್ ಅಮುಕ್ತ ಮಾತನಾಡಿ, ‘ಇದು ಕಾಲೇಜ್ ಹುಡುಗ- ಹುಡುಗಿಯರ ಹದಿ ಹರೆಯದ ಮನಸ್ಸಿನ ಹೊಯ್ದಾಟವನ್ನು ಹೇಳುವ ಸಿನಿಮಾ.
ಇದರ ಜತೆಗೆ ಶೈಕ್ಷಣಿಕ ಪರಿಸರದ ಕ್ರೌರ್ಯದ ಮುಖವನ್ನು ತೆರೆದಿಡಲಾಗಿದೆ. ಮಕ್ಕಳ ವರ್ತನೆಗಳು, ಪೋಷಕರ ಜವಾಬ್ದಾರಿಗಳು, ಶಿಕ್ಷಣದ ಮಹತ್ವ ಮುಂತಾದ ಅಂಶಗಳ ಸುತ್ತಾ ಸಿನಿಮಾ ಸಾಗುತ್ತದೆ. ಈಗ ಬಿಡುಗಡೆ ಆಗಿರುವ ಟ್ರೇಲರ್ ಸೈಡ್ ಎ. ಸೈಡ್ ಬಿ ಟ್ರೇಲರ್ ಕೂಡ ಸದ್ಯದಲ್ಲೇ ಬರಲಿದೆ’ ಎಂದರು.
ಸುಬ್ರಮಣ್ಯ ಕುಕ್ಕೆ ಹಾಗೂ ಎ ಸಿ ಶಿವಲಿಂಗೇಗೌಡ ನಿರ್ಮಾಪಕರು. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಅರವಿಂದ ರಾವ್, ಸಿಂಚನಾ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ನಟಿಸಿದ್ದಾರೆ.
