ಮತದಾನದ ಮಹತ್ವ ಸಾರುವ ರ್‍ಯಾಪ್ ಸಾಂಗ್‌ ಬಿಡುಗಡೆ

| Published : Apr 24 2024, 02:25 AM IST

ಸಾರಾಂಶ

ಮಾಧ್ಯಮ ಅನೇಕ ಸಂಸ್ಥೆಯಿಂದ ವೋಟ್ ಮತದಾನದ ಮಹತ್ವ ಸಾರುವ ವಿಶೇಷವಾದ ಹಾಡು ಬಿಡುಗಡೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

‘ವೋಟ್‌ ನಮ್ಮ ಪವರ್‌’ ಎಂಬ ಹಾಡು ಇತ್ತೀಚೆಗೆ ಬಿಡುಗಡೆ ಆಯಿತು. ರಾಜ್‌ ಗೋಪಿ ಈ ಹಾಡನ್ನು ನಿರ್ದೇಶಿಸಿದ್ದಾರೆ. ಮಾಧ್ಯಮ ಅನೇಕ ಸಂಸ್ಥೆ ಈ ಹಾಡನ್ನು ನಿರ್ಮಿಸಿದೆ. ರಾಕೇಶ್‌ ಅಡಿಗ ಹಾಗೂ ಐಶ್ವರ್ಯ ರಂಗನಾಜನ್‌ ಅವರ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ತೇಜಸ್ವಿನಿ ಶರ್ಮ, ಸ್ಮೈಲ್‌ ಗುರು ರಕ್ಷಿತ್‌, ಬೃಂದಾ ಪ್ರಭಾಕರ್‌, ಅಭಯ್‌, ಅನನ್ಯ ಅಮರ್‌ ಹೆಜ್ಜೆ ಹಾಕಿದ್ದಾರೆ.

ಮಾಧ್ಯಮ ಅನೇಕ ಸಂಸ್ಥೆಯ ಮುಖ್ಯಸ್ಥರಾದ ಅರವಿಂದ್ ಮೋತಿ ಈ ಹಾಡಿನ ಯೋಜನೆಯ ಕ್ರಿಯೇಟಿವ್‌ ಹೆಡ್‌ ಆಗಿದ್ದು, ಅನು ಮೋತಿ ಹಾಡು ಬರೆದಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಗಿರೀಶ್‌ ಕ್ಯಾಮೆರಾ ಇದೆ.