ಸಾರಾಂಶ
ಸೋಷಿಯಲ್ ಮೀಡಿಯಾಗಳಲ್ಲಿ ದೇಶ ಸಂಬಂಧಿ ಯಾವುದೇ ವಿಚಾರಗಳನ್ನು ಹಂಚಿಕೊಳ್ಳುವ, ಪ್ರತಿಕ್ರಿಯೆ ನೀಡುವ ಮೊದಲು ಆ ಮಾಹಿತಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸಿ’ ಎಂದು ಯಶ್ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
ಸಿನಿವಾರ್ತೆ : ‘ದೇಶದ ಯೋಧರ ಧೀರ ನಡೆಗೆ ನಮ್ಮ ಗೌರವ ಸಲ್ಲಿಸುವ ಜೊತೆಗೆ ಇಂಥಾ ಸೂಕ್ಷ್ಮ ಸನ್ನಿವೇಶದಲ್ಲಿ ನಾವು ಒಗ್ಗಟ್ಟಾಗಿ ಜವಾಬ್ದಾರಿಯುತವಾಗಿ ವರ್ತಿಸೋಣ. ಸೋಷಿಯಲ್ ಮೀಡಿಯಾಗಳಲ್ಲಿ ದೇಶ ಸಂಬಂಧಿ ಯಾವುದೇ ವಿಚಾರಗಳನ್ನು ಹಂಚಿಕೊಳ್ಳುವ, ಪ್ರತಿಕ್ರಿಯೆ ನೀಡುವ ಮೊದಲು ಆ ಮಾಹಿತಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸಿ’ ಎಂದು ಯಶ್ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
ಟ್ವೀಟ್ ಮಾಡಿರುವ ಅವರು, ‘ಭಾರತೀಯ ಸಶಸ್ತ್ರ ಪಡೆಗಳ ದೃಢ ಶಕ್ತಿ ಮತ್ತು ನಿಖರ ದೃಷ್ಟಿಕೋನದ ನಡೆಗೆ ಸೆಲ್ಯೂಟ್. ಅವರ ಸೇವೆಗೆ ಕೃತಜ್ಞರಾಗುವ ಜೊತೆಗೆ ನಾವೆಲ್ಲ ಜೊತೆಯಾಗಿ ನಿಂತು ಮಾಹಿತಿ ಸೋರಿಕೆ, ಅಪಪ್ರಚಾರಗಳನ್ನು ತಡೆದು ದೇಶವನ್ನು ಬಲಿಷ್ಠಗೊಳಿಸೋಣ’ ಎಂದು ಹೇಳಿದ್ದಾರೆ.
‘ದಾಳಿಯಿಂದ ಹಾನಿಗೊಳಗಾದ, ನೋವುಣ್ಣುತ್ತಿರುವವರ ಭಾರತೀಯರ ಜೊತೆಗೆ ನಿಲ್ಲೋಣ. ಎಲ್ಲರೂ ಧೈರ್ಯವಾಗಿರಿ, ಆತ್ಮವಿಶ್ವಾಸದಿಂದಿರಿ. ಜೈ ಹಿಂದ್’ ಎಂದೂ ಯಶ್ ಟ್ವೀಟ್‌ನಲ್ಲಿ ಹೇಳಿದ್ದಾರೆ. ಯಶ್ ಅವರ ಜವಾಬ್ದಾರಿಯುತ ಮಾತಿಗೆ ಶ್ಲಾಘನೆ ವ್ಯಕ್ತವಾಗಿದೆ.