‘ನಾವಾಗಿಯೇ ಹೋಗಿ ಕೇಳಿ ಪಡೆದುಕೊಂಡ ಪ್ರಶಸ್ತಿ ಅಲ್ಲ. ಅವರೇ ಕರೆದು ಗುರುತಿಸಿ ಕೊಡುವ ಪ್ರಶಸ್ತಿಯನ್ನು ಮತ್ತು ಪ್ರಶಸ್ತಿ ಪಡೆದುಕೊಂಡ ಕನ್ನಡದ ಕಲಾವಿದರನ್ನು ಅತ್ಯಂತ ನಿರ್ಲಕ್ಷ್ಯದಿಂದ ನಡೆಸಿಕೊಳ್ಳುವುದು ಯಾಕೆ?’
ಸಿನಿವಾರ್ತೆ
‘ನಾವಾಗಿಯೇ ಹೋಗಿ ಕೇಳಿ ಪಡೆದುಕೊಂಡ ಪ್ರಶಸ್ತಿ ಅಲ್ಲ. ಅವರೇ ಕರೆದು ಗುರುತಿಸಿ ಕೊಡುವ ಪ್ರಶಸ್ತಿಯನ್ನು ಮತ್ತು ಪ್ರಶಸ್ತಿ ಪಡೆದುಕೊಂಡ ಕನ್ನಡದ ಕಲಾವಿದರನ್ನು ಅತ್ಯಂತ ನಿರ್ಲಕ್ಷ್ಯದಿಂದ ನಡೆಸಿಕೊಳ್ಳುವುದು ಯಾಕೆ?’
- ಹೀಗೆ ಪ್ರಶ್ನೆ ಮಾಡಿರುವುದು ನಟ ಶ್ರೀಮುರಳಿ. ಅವರ ಈ ಬೇಸರ ಫಿಲಂಫೇರ್ ಅವಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ.
ಈ ಕುರಿತು ನಟ ಶ್ರೀಮುರಳಿ, ‘ಫಿಲಂಫೇರ್ ಅವಾರ್ಡ್ ತೆಗೆದುಕೊಂಡ ನಟ ನಟಿಯರ ಫೋಟೋಗಳನ್ನು ಫಿಲಂಫೇರ್ ಮ್ಯಾಗಜೀನ್‌ನ ಮುಖಪುಟದಲ್ಲಿ ಹಾಕುತ್ತಾರೆ. ಆದರೆ, ಈ ಮುಖಪುಟದಲ್ಲಿ ಕನ್ನಡದವರು ಮಾತ್ರ ಇರಲ್ಲ. ಯಾಕೆ ಈ ನಿರ್ಲಕ್ಷ್ಯ ಧೋರಣೆ ಎಂಬುದು ಅರ್ಥವಾಗುತ್ತಿಲ್ಲ. ನಾವು ಹೋಗಿ ಕೇಳಿ ಪಡೆದುಕೊಂಡ ಪ್ರಶಸ್ತಿ ಅಲ್ಲ ಅದು. ಅವರೇ ಕರೆದು ಗೌರವಿಸಿದ್ದು. ಅವರ ಗೌರವಕ್ಕೆ ಪ್ರಾಮುಖ್ಯತೆ ಕೊಡುವಾಗ ಕನ್ನಡದವರನ್ನು ನಿರ್ಲಕ್ಷಿಸುವ ಅಥವಾ ಉಡಾಫೆಯಿಂದ ನಡೆಸಿಕೊಳ್ಳುವ ಮನಸ್ಥಿತಿ ಯಾಕೆ, ಕನ್ನಡದವರು ಏನು ತಪ್ಪು ಮಾಡಿದ್ದಾರೆ. ಈ ರೀತಿಯ ತಾತ್ಸಾರ ಧೋರಣೆ ಸರಿಯಲ್ಲ’ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೆ 70ನೇ ಫಿಲಮ್ ಫೇರ್ ಅವಾರ್ಡ್ ಕಾರ್ಯಕ್ರಮ ಕೇರಳದ ಕೊಚ್ಚಿಯಲ್ಲಿ ನಡೆಯಿತು. ‘ಬಘೀರ’ ಚಿತ್ರಕ್ಕಾಗಿ ನಟ ಶ್ರೀಮುರಳಿ ಅವರಿಗೆ ಪ್ರಶಸ್ತಿ ನೀಡಲಾಗಿತ್ತು.