ಕಾಳಜಿಯಿಂದ ಮಾಡಿರುವ ಸಿನಿಮಾ: ಶ್ರೀಮುರಳಿ

| Published : Nov 27 2024, 01:01 AM IST

ಸಾರಾಂಶ

ನಿದ್ರಾದೇವಿ ನೆಕ್ಸ್ಟ್ ಡೋರ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

ಪ್ರವೀರ್ ಶೆಟ್ಟಿ ನಟನೆಯ, ಸುರಾಗ್‌ ಸಾಗರ್‌ ನಿರ್ದೇಶನದ ‘ನಿದ್ರಾದೇವಿ Next door’ ಚಿತ್ರದ ಟೀಸರ್‌ ಅನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿದರು.

ಶ್ರೀಮುರಳಿ, ‘ಈ ಚಿತ್ರದ ನಿರ್ಮಾಪಕ ಜಯರಾಮ್‌ ದೇವಸಮುದ್ರ ತುಂಬಾ ಕಾಳಜಿಯಿಂದ ಈ ಚಿತ್ರವನ್ನು ನಿರ್ಮಿಸಿರುವುದು ಗೊತ್ತಾಗುತ್ತದೆ. ಇಂಥ ನಿರ್ಮಾಪಕರಿಗೆ ಗೆಲುವು ಸಿಗಬೇಕು. ಟೀಸರ್‌ ತುಂಬಾ ಚೆನ್ನಾಗಿ ಬಂದಿದೆ’ ಎಂದರು.

ಪ್ರವೀರ್‌ ಶೆಟ್ಟಿ, ‘ಬೇರೆ ರೀತಿಯ ಕತೆಯನ್ನು ಹೇಳಿರುವ ಸಿನಿಮಾ ಇದು. ಎಲ್ಲರಿಗೂ ಈ ಸಿನಿಮಾ ಇಷ್ಟವಾಗುತ್ತದೆಂಬ ನಂಬಿಕೆ ಇದೆ’ ಎಂದರು. ನಿರ್ದೇಶಕ ಸುರಾಗ್‌, ರಿಷಿಕಾ ನಾಯ್ಕ್‌, ಶೈನ್ ಶೆಟ್ಟಿ, ಶ್ರುತಿ ಹರಿಹರನ್, ಸುಧಾರಾಣಿ, ಕೆ ಎಸ್‌ ಶ್ರೀಧರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.