ಸಾರಾಂಶ
ನಟ ಯಶ್ ಅವರು ಟಾಕ್ಸಿಕ್ ಚಿತ್ರದಲ್ಲಿ ಡಾನ್ ಪಾತ್ರ ಮಾಡುತ್ತಿದ್ದಾರೆ.
ಸಿನಿವಾರ್ತೆ
ಬಹು ನಿರೀಕ್ಷೆಯ ‘ಟಾಕ್ಸಿಕ್’ ಚಿತ್ರದಲ್ಲಿ ನಟ ಯಶ್ ಸ್ಟೈಲಿಷ್ ಡಾನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಗೋವಾ ಹಿನ್ನೆಲೆಯಲ್ಲಿ ಡ್ರಗ್ ಮಾಫಿಯಾ ಸುತ್ತ ಸಾಗುವ ಕತೆಯುಳ್ಳ ಈ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಬೆಂಗಳೂರು, ಗೋವಾ ನಂತರ 150 ದಿನಗಳ ಕಾಲ ಲಂಡನ್‌ನಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಯಶ್ ಅವರ ಡಾನ್ ಪಾತ್ರದ ಬಹುತೇಕ ದೃಶ್ಯಗಳ ಚಿತ್ರೀಕರಣ ಲಂಡನ್‌ನಲ್ಲಿ ನಡೆಯಲಿದೆಯಂತೆ. ಶ್ರೀಲಂಕಾದಲ್ಲೂ ಕೆಲವು ದಿನಗಳ ಶೂಟಿಂಗ್ ನಡೆಯಲಿದೆ ಎನ್ನುತ್ತವೆ ಮೂಲಗಳು. ಗೀತು ಮೋಹನ್ ದಾಸ್ ನಿರ್ದೇಶಿಸಿ, ಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿರುವ ಈ ಚಿತ್ರ 60, 70ರ ದಶಕದ ಗೋವಾದ ಡ್ರಗ್ಸ್ ಮಾಫಿಯಾ ಕತೆ ಹೊಂದಿದೆ ಎನ್ನಲಾಗಿದೆ.