ತನ್ನ ನಟನೆ, ನಿರ್ಮಾಣದ ‘ಟಾಕ್ಸಿಕ್‌’ ಸಿನಿಮಾಕ್ಕೆ ಯುವ ಜನರನ್ನು ಸೆಳೆಯುವ ಪ್ರಯತ್ನದಲ್ಲಿರುವ ಯಶ್‌ ಇದೀಗ ಆನ್‌ಲೈನ್‌ ಗೇಮಿಂಗ್‌ ಕ್ಷೇತ್ರ ಪ್ರವೇಶಿಸಿದ್ದಾರೆ. ಯುವ ಜನರೇ ತುಂಬಿರುವ ಜನಪ್ರಿಯ ಆನ್​​ಲೈನ್ ಗೇಮ್ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಮಾಡಿಕೊಂಡಿದ್ದಾರೆ.

 ಸಿನಿವಾರ್ತೆ 

ತನ್ನ ನಟನೆ, ನಿರ್ಮಾಣದ ‘ಟಾಕ್ಸಿಕ್‌’ ಸಿನಿಮಾಕ್ಕೆ ಯುವ ಜನರನ್ನು ಸೆಳೆಯುವ ಪ್ರಯತ್ನದಲ್ಲಿರುವ ಯಶ್‌ ಇದೀಗ ಆನ್‌ಲೈನ್‌ ಗೇಮಿಂಗ್‌ ಕ್ಷೇತ್ರ ಪ್ರವೇಶಿಸಿದ್ದಾರೆ. ಯುವ ಜನರೇ ತುಂಬಿರುವ ಜನಪ್ರಿಯ ಆನ್​​ಲೈನ್ ಗೇಮ್ ಬಿಜಿಎಂಐ ಜೊತೆ ಕೊಲ್ಯಾಬರೇಟ್ ಮಾಡಿಕೊಂಡಿದ್ದಾರೆ. ದೇಶದೊಳಗೇ ಸುಮಾರು 26 ಕೋಟಿಗೂ ಹೆಚ್ಚು ಮಂದಿ ಡೌನ್‌ಲೋಡ್‌ ಮಾಡಿಕೊಂಡಿರುವ ಬಿಜಿಎಂಐ ಗೇಮ್‌ನ ಹೊಸ 4.4 ಅಪ್‌ಡೇಟ್‌ನ ಭಾಗವಾಗಿ ಈ ಸಹಯೋಗ ಮಾಡಲಾಗಿದೆ.

ಇದಕ್ಕೆ ಯಶ್ x ಬಿಜಿಎಂಐ: 

ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್ ಎಂಬ ಹೆಸರನ್ನಿಡಲಾಗಿದೆ. ಈ ಗೇಮ್‌ನಲ್ಲಿ ಕನ್ನಡ ಹಾಗೂ ಹಿಂದಿಯಲ್ಲಿ ಯಶ್ ಧ್ವನಿ ಕೇಳಬಹುದು. ‘ಟಾಕ್ಸಿಕ್‌’ ಸಿನಿಮಾದಲ್ಲಿ ಬಳಸಲಾದ ಆಯುಧಗಳ ಮೂಲಕ ಫೈಟ್ ಮಾಡಬಹುದು. ಈ ಗೇಮ್‌ನಲ್ಲಿ ಯಶ್‌ ಹೇರ್‌ಸ್ಟೈಲ್, ಉಡುಪು ಮತ್ತು ಆಕ್ಷನ್ ಮ್ಯಾನರಿಸಂಗಳನ್ನು ಅಳವಡಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಯಶ್‌

 ‘ಜೆನ್‌ ಜೀಗಳಿಗೆ ಅಧಿಕೃತತೆ, ಕತ್ತಿಯಲುಗಿನ ನಡೆಯಂಥಾ ರೋಚಕತೆ, ವಿಶಿಷ್ಟ ಕಥಾಹಂದರಗಳು ಇಷ್ಟ. ಆ ವೈಬ್‌ ಟಾಕ್ಸಿಕ್‌ನಲ್ಲಿದೆ. ನನ್ನ ಧ್ವನಿ ಮತ್ತು ಟಾಕ್ಸಿಕ್‌ನ ಎನರ್ಜಿ ಈ ಗೇಮ್‌ಗಳಲ್ಲಿದೆ. ದೊಡ್ಡವರ ಫೇರಿಟೇಲ್‌ ಯುವ ಸಮುದಾಯಕ್ಕೆ ಅದ್ಭುತ ಅನುಭವ ನೀಡುತ್ತದೆ ಎಂಬ ವಿಶ್ವಾಸವಿದೆ. ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಕುತೂಹಲವಿದೆ’ ಎಂದರು.

ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್‌’ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್‌ ಹಾಗೂ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಶನ್ಸ್‌ ಸಂಸ್ಥೆಗಳು ನಿರ್ಮಿಸುತ್ತಿವೆ.