ರಮೇಶ್‌ ಅರವಿಂದ್‌ ಮತ್ತು ಗಣೇಶ್‌ ಮತ್ತೆ ಒಂದಾದರು: 'ಯುವರ್ಸ್‌ ಸಿನ್ಸಿಯರ್ಲಿ ರಾಮ್‌' ಟೀಸರ್‌ ಬಿಡುಗಡೆ!

| Published : Sep 07 2024, 01:31 AM IST / Updated: Sep 07 2024, 04:44 AM IST

ಸಾರಾಂಶ

ರಮೇಶ್‌ ಅರವಿಂದ್‌ ಮತ್ತು ಗಣೇಶ್‌ 'ಯುವರ್ಸ್‌ ಸಿನ್ಸಿಯರ್ಲಿ ರಾಮ್‌' ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಎ ಆರ್‌ ವಿಖ್ಯಾತ್‌ ನಿರ್ದೇಶನದ ಈ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

 ಸಿನಿವಾರ್ತೆ

ನಟರಾದ ರಮೇಶ್‌ ಅರವಿಂದ್‌ ಹಾಗೂ ಗಣೇಶ್‌ ಅವರು ಮತ್ತೆ ಜತೆಯಾಗಿದ್ದಾರೆ. ಈ ಇಬ್ಬರು ತೆರೆ ಮೇಲೆ ಜತೆಯಾಗಿದ್ದು, ಇವರ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ‘ಯುವರ್ಸ್‌ ಸಿನ್ಸಿಯರ್ಲಿ ರಾಮ್‌’ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಎ ಆರ್‌ ವಿಖ್ಯಾತ್‌ ನಿರ್ದೇಶನದ ಈ ಚಿತ್ರವು ಯುದ್ಧ, ಪ್ರೀತಿ ಮತ್ತು ಸ್ನೇಹದ ಹಿನ್ನೆಲೆಯಲ್ಲಿ ಮೂಡಿ ಬರಲಿದೆ ಎಂಬುದು ಟೀಸರ್‌ ನೋಡಿದವರು ಮಾತನಾಡುತ್ತಿದ್ದಾರೆ.

ಸತ್ಯ ರಾಯಲ ನಿರ್ಮಾಣದ ಈ ಚಿತ್ರಕ್ಕೆ ಅನೂಪ್‌ ಸಿಳೀನ್‌ ಸಂಗೀತ, ನವೀನ್‌ ಕುಮಾರ್‌ ಕ್ಯಾಮೆರಾ ಚಿತ್ರಕ್ಕಿದೆ. ಗೌರಿ-ಗಣೇಶನ ಹಬ್ಬದ ಪ್ರಯುಕ್ತ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ಅಂದಹಾಗೆ ಈ ಹಿಂದೆ ರಮೇಶ್‌ ಅರವಿಂದ್‌ ಅವರು, ಗಣೇಶ್‌ ನಟನೆಯ ‘ಸುಂದರಾಂಗ ಜಾಣ’ ಚಿತ್ರವನ್ನು ನಿರ್ದೇಶಿಸಿದ್ದರು.