ಸಾರಾಂಶ
ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಕುಳಿತಿರುವ ಕೆಲ ನಗರ ನಕ್ಸಲರು ವಿದೇಶಗಳಿಂದ ಹಣ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಇಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.
ಗಢ್‌ಚಿರೋಲಿ: ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಕುಳಿತಿರುವ ಕೆಲ ನಗರ ನಕ್ಸಲರು ವಿದೇಶಗಳಿಂದ ಹಣ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಇಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.
ಮಂಗಳವಾರ ಗಢ್‌ಚಿರೋಲಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಬೇರೆ ರಾಜ್ಯಗಳ ನಗರ ನಕ್ಸಲರು ವಿದೇಶಗಳಿಂದ ದೇಣಿಗೆ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಗಢ್‌ಚಿರೋಲಿ ಜನರನ್ನು ಅಭಿವೃದ್ಧಿ ಮಾರ್ಗದಿಂದ ದೂರವಿಡುತ್ತಿದ್ದಾರೆ. ಇಬ್ಬರು ಕರ್ನಾಟಕದ ಬೆಂಗಳೂರು ಹಾಗೂ ಇನ್ನಿಬ್ಬರು ಕೋಲ್ಕತಾದಲ್ಲಿ ಕುಳಿತು ನಮ್ಮ ಜನರನ್ನು ಸಂವಿಧಾನದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.