ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕವು ತುಂಬಾ ದುಬಾರಿಯಾಗಿದೆ ಎಂದು ಆರೋಪಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದ್ದು, ‘ಸರ್ಕಾರಿ ಕಾಲೇಜು ಶುಲ್ಕಕ್ಕೂ ಖಾಸಗಿ ಶುಲ್ಕಕ್ಕೂ ಹೋಲಿಕೆ ಸಲ್ಲದು. ಸ್ವಯಂ ನಿಧಿಯಿಂದ ನಡೆವ ಕಾಲೇಜುಗಳು ಸರ್ಕಾರಿ ಕಾಲೇಜಿನಷ್ಟೇ ಫೀ ವಿಧಿಸಬೇಕು ಎಂದು ಹೇಳಲು ಆಗದು’ ಎಂದಿದೆ.

ನವದೆಹಲಿ : ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕವು ತುಂಬಾ ದುಬಾರಿಯಾಗಿದೆ ಎಂದು ಆರೋಪಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದ್ದು, ‘ಸರ್ಕಾರಿ ಕಾಲೇಜು ಶುಲ್ಕಕ್ಕೂ ಖಾಸಗಿ ಶುಲ್ಕಕ್ಕೂ ಹೋಲಿಕೆ ಸಲ್ಲದು. ಸ್ವಯಂ ನಿಧಿಯಿಂದ ನಡೆವ ಕಾಲೇಜುಗಳು ಸರ್ಕಾರಿ ಕಾಲೇಜಿನಷ್ಟೇ ಫೀ ವಿಧಿಸಬೇಕು ಎಂದು ಹೇಳಲು ಆಗದು’ ಎಂದಿದೆ. 

ವರ್ಷಕ್ಕೆ 18.90 ಲಕ್ಷ ರು.ನಿಂದ 25 ಲಕ್ಷ ರು. ವರೆಗೆ

ರಾಜಸ್ಥಾನದ ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕ ವರ್ಷಕ್ಕೆ 18.90 ಲಕ್ಷ ರು.ನಿಂದ 25 ಲಕ್ಷ ರು. ವರೆಗೆ ಇರುತ್ತದೆ. ವಾರ್ಷಿಕ 8 ಲಕ್ಷ ರು. ಆದಾಯ ಗಳಿಸುವ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಅಷ್ಟು ಮೊತ್ತವನ್ನು ಭರಿಸುವ ಶಕ್ತಿ ಇರುವುದಿಲ್ಲ ಎಂದು ಆಕಾಂಕ್ಷಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್‌ ತಿರಸ್ಕರಿಸಿತ್ತು. 

 ಸುಪ್ರೀಂ ಮೆಟ್ಟಿಲೇರಿದ್ದರು

ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಮೆಟ್ಟಿಲೇರಿದ್ದರು. ಅಲ್ಲಿ ನ್ಯಾ। ಬಿ.ವಿ. ನಾಗರತ್ನ ಮತ್ತು ಜಯಮಾಲ್ಯ ಬಾಗ್ಚಿ ಅವರ ಪೀಠ, ‘ಸರ್ಕಾರಿ ಮೆಡಿಕಲ್ ಕಾಲೇಜಿಗೆ ಹೋಲಿಸಿ, ಸ್ವಯಂ ನಿಧಿ ಸಂಗ್ರಹ ಆಧರಿಸಿ ಕೆಲಸ ಮಾಡುವ ಖಾಸಗಿ ಕಾಲೇಜುಗಳನ್ನು ದುಬಾರಿ ಎನ್ನಲಾಗದು. ಜತೆಗೆ, ಎರಡೂ ಕಡೆಗಳಲ್ಲಿ ಒಂದೇ ಶುಲ್ಕ ಇರಬೇಕೆಂದು ನಿರೀಕ್ಷಿಸಲಾಗದು. ಹಾಗಾಗಿ ನಾವು ಫೀ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದಿತು.

ಅಲ್ಲದೆ, ‘ವಿದ್ಯಾರ್ಥಿಗಳು ಶಿಷ್ಯವೇತನ ಪಡೆದು ಶಿಕ್ಷಣ ಮುಂದುವರಿಸಬಹುದು. ಈ ದೇಶಕ್ಕೆ ವೈದ್ಯರ ಆವಶ್ಯಕತೆಯಿದೆ. ’ ಎಂದೂ ಹೇಳಿತು.

ಜತೆಗೆ, ‘ಈ ದೇಶಕ್ಕೆ ವೈದ್ಯರ ಅಗತ್ಯವಿದೆ’ ಎಂದು ಹೇಳಿದೆ.