ಗುಜರಾತ್‌ನಿಂದ ಅಯೋಧ್ಯೆಗೆ ಬಂದಿದ್ದ 108 ಅಡಿ ಅಗರಬತ್ತಿಗೆ ಅಗ್ನಿಸ್ಪರ್ಶ

| Published : Jan 17 2024, 01:47 AM IST / Updated: Jan 17 2024, 03:26 PM IST

ಗುಜರಾತ್‌ನಿಂದ ಅಯೋಧ್ಯೆಗೆ ಬಂದಿದ್ದ 108 ಅಡಿ ಅಗರಬತ್ತಿಗೆ ಅಗ್ನಿಸ್ಪರ್ಶ
Share this Article
  • FB
  • TW
  • Linkdin
  • Email

ಸಾರಾಂಶ

ಗುಜರಾತ್‌ನಿಂದ ಅಯೋಧ್ಯೆಗೆ ಉಡುಗೊರೆಯಾಗಿ ಬಂದಿದ್ದ 108 ಅಡಿ ಅಗರಬತ್ತಿಗೆ ಮಂಗಳವಾರ ಅಗ್ನಿಸ್ಪರ್ಶ ಮಾಡಲಾಯಿತು.

ಅಯೋಧ್ಯೆ: ಅಯೋಧ್ಯೆಯ ರಾಮಜನ್ಮಭೂಮಿಗೆ ಗುಜರಾತ್‌ನ ವಡೋದರಾದಿಂದ ಬಂದಿದ್ದ ಬೃಹತ್‌ ಅಗರಬತ್ತಿಯನ್ನು ಮಂಗಳವಾರ ಹಚ್ಚಲಾಗಿದೆ. ಟ್ರಸ್ಟ್‌ನ ಮಹಾಂತ ನೃತ್ಯ ಗೋಪಾಲ್‌ ದಾಸ್‌ ಅವರು ಅಗ್ನಿಸ್ಪರ್ಶ ಮಾಡಿದರು. 

ಈ ಅಗರಬತ್ತಿ ಒಮ್ಮೆ ಹಚ್ಚಿದರೆ ಸುತ್ತಲಿನ 50 ಕಿ.ಮೀ. ವರೆಗೆ ಸುವಾಸನೆ ಬೀರುತ್ತದೆ ಹಾಗೂ ಪೂರ್ಣ ಆರಲು 1.5 ತಿಂಗಳು ಹಿಡಿಯುತ್ತದೆ. 

ಈ ಅಗರಬತ್ತಿಯ ತಯಾರಿಕೆಯಲ್ಲಿ 376 ಕೇಜಿ ಅಂಟು, 1470 ಕೇಜಿ ಗೋವಿನ ಸಗಣಿ, 190 ಕೇಜಿ ಹಸುವಿನ ತುಪ್ಪ, 420 ಕೇಜಿ ಗಿಡಮೂಲಿಕೆಗಳನ್ನು ಬಳಸಲಾಗಿದೆ. ಇದರ ಒಟ್ಟು ತೂಕ ಬರೋಬ್ಬರಿ 3610 ಕೇಜಿ ಇದೆ.

ದಿಲ್ಲಿಯಲ್ಲಿ ಆಪ್‌ ನಾಯಕರಿಂದ ಸುಂದರಕಾಂಡ ಪಠಣ

ನವದೆಹಲಿ: ಜ.22ರ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಡಳಿತಾರೂಢ ಆಮ್‌ ಆದ್ಮಿ ಪಕ್ಷ ಮಂಗಳವಾರ ಸುಂದರಕಾಂಡ ಪಠಣ ಹಮ್ಮಿಕೊಂಡಿತು. 

ಇದರ ಭಾಗವಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರು ಮಂಗಳವಾರ ತಮ್ಮ ಕುಟುಂಬ ಹಾಗೂ ಕಾರ್ಯಕರ್ತರ ಒಡಗೂಡಿ ಸುಂದರಕಾಂಡ ಪಾಠ ಪಠಣದಲ್ಲಿ ಪಾಲ್ಗೊಂಡರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ,‘ಕೇಜ್ರಿವಾಲ್‌ ಅವರು ಈ ಹಿಂದೆ ರಾಮ ಮಂದಿರ ನಿರ್ಮಾಣ ಬೇಡ. 

ಅಲ್ಲಿ ಶಾಲೆ ತೆರೆಯಬೇಕಿತ್ತು ಎಂದು ಹೇಳಿದ್ದರು. ಈಗ ಅವರೇ ರಾಮನಾಮ ಪಠಿಸುತ್ತಿದ್ದಾರೆ. ಇದು ಆಪ್‌ನ ದ್ವಂದ್ವ ನಿಲುವು’ ಎಂದು ಟೀಕಿಸಿದೆ.