ಸಾರಾಂಶ
ನವೀಕೃತ ಕಾಶಿ ವಿಶ್ವನಾಥ ದೇಗುಲ ಭಾರೀ ಪ್ರಮಾಣದಲ್ಲಿ ಭಕ್ತರನ್ನು ಸೆಳೆಯುತ್ತಿದ್ದು ಕಳೆದ 2 ವರ್ಷದಲ್ಲಿ 12.92 ಕೋಟಿ ಜನರು ದೇವರ ದರ್ಶನ ಮಾಡಿದ್ದಾರೆ.
2021ರಲ್ಲಿ ಉದ್ಘಾಟನೆಯಾಗಿದ್ದ ಕಾಶಿ ವಿಶ್ವನಾಥ ಕಾರಿಡಾರ್
ವಾರಾಣಸಿ: ನವೀಕೃತ ಕಾಶಿ ವಿಶ್ವನಾಥ ದೇಗುಲ ಭಾರೀ ಪ್ರಮಾಣದಲ್ಲಿ ಭಕ್ತರನ್ನು ಸೆಳೆಯುತ್ತಿದ್ದು ಕಳೆದ 2 ವರ್ಷದಲ್ಲಿ 12.92 ಕೋಟಿ ಜನರು ದೇವರ ದರ್ಶನ ಮಾಡಿದ್ದಾರೆ.ಈ ಕುರಿತು ಮಾಹಿತಿ ನೀಡಿದ ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಕುಮಾರ್ ವರ್ಮಾ, ‘ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್‌ನ್ನು 2021ರ ಡಿ.13ರಂದು ಉದ್ಘಾಟನೆ ಮಾಡಿದಾಗಿನಿಂದ ಇಲ್ಲಿಯವರೆಗೆ ದಾಖಲೆಯ 12 ಕೋಟಿ, 92 ಲಕ್ಷ 24 ಸಾವಿರ ಮಂದಿ ವಿಶ್ವನಾಥನ ದರ್ಶನ ಪಡೆದಿದ್ದು, ತಿಂಗಳಾಂತ್ಯದ ವೇಳೆಗೆ 13 ಕೋಟಿ ಮೀರುವ ನಿರೀಕ್ಷೆಯಿದೆ. ಇದರ ಪೈಕಿ ಶ್ರಾವಣ ಮಾಸವೊಂದರಲ್ಲೇ 1.6 ಕೋಟಿಗಿಂತ ಹೆಚ್ಚು ಮಂದಿ ದರ್ಶನ ಪಡೆದಿದ್ದಾರೆ’ ಎಂದು ತಿಳಿಸಿದ್ದಾರೆ.ಕಾಶಿ ವಿಶ್ವನಾಥ ಕಾರಿಡಾರ್‌ನಲ್ಲಿ ದೇಗುಲದ ಪ್ರಾಂಗಣವನ್ನು 5 ಲಕ್ಷ ಚದರ ಅಡಿಗೆ ಹೆಚ್ಚಿಸಲಾಗಿದ್ದು, ಏಕಕಾಲದಲ್ಲಿ 75 ಸಾವಿರ ಭಕ್ತಾದಿಗಳು ದೇಗುಲವನ್ನು ಪ್ರವೇಶಿಸಬಹುದಾಗಿದೆ.