ಸಾರಾಂಶ
ಆಪರೇಷನ್ ಸಿಂದೂರ್‌ನಿಂದ ತತ್ತರಿಸಿರುವ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ 2 ಪ್ರತ್ಯೇಕ ದಾಳಿಗಳು ನಡೆದಿದ್ದು, ಅದರಲ್ಲಿ 14 ಪಾಕ್ ಸೈನಿಕರು ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ.
ಇಸ್ಲಾಮಾಬಾದ್: ಆಪರೇಷನ್ ಸಿಂದೂರ್‌ನಿಂದ ತತ್ತರಿಸಿರುವ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ 2 ಪ್ರತ್ಯೇಕ ದಾಳಿಗಳು ನಡೆದಿದ್ದು, ಅದರಲ್ಲಿ 14 ಪಾಕ್ ಸೈನಿಕರು ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ.
ದಾಳಿಯ ಹೊಣೆಯನ್ನು ಬಲೂಚ್ ಲಿಬರೇಷನ್ ಆರ್ಮಿ(ಬಿಎಲ್‌ಎ) ಹೊತ್ತುಕೊಂಡಿದೆ. ಮೊದಲ ದಾಳಿಯನ್ನು ಬಿಎಲ್‌ಎನ ವಿಶೇಷ ಯುದ್ಧತಂತ್ರದ ಕಾರ್ಯಾಚರಣೆ ದಳ ರಿಮೋಟ್ ಚಾಲಿತ ಸುಧಾರಿತ ಸ್ಫೋಟಕ ಬಳಸಿ ಬೋಲನ್ ಮಾಚ್ ಪ್ರದೇಶದಲ್ಲಿ ಸಾಗುತ್ತಿದ್ದ ಪಾಕ್ ಸೇನಾ ಬೆಂಗಾವಲು ಪಡೆಯ ಮೇಲೆ ನಡೆಸಿದೆ. ಇದರಲ್ಲಿ 12 ಸೈನಿಕರು ಹತರಾಗಿದ್ದಾರೆ. ಕೆಚ್ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳವನ್ನು ಗುರಿಯಾಗಿಸಿ ನಡೆಸಿದ ಇನ್ನೊಂದು ದಾಳಿಯಲ್ಲಿ 2 ಯೋಧರು ಮೃತಪಟ್ಟಿದ್ದಾರೆ.