ಭಾರತವನ್ನು ಕೆಣಕಿದರೆ ಪಾಕಿಸ್ತಾನ ಭೂಪಟದಲ್ಲಿ ಉಳಿಯಲ್ಲ: ಪಾಟೀಲ

| Published : May 08 2025, 12:37 AM IST

ಭಾರತವನ್ನು ಕೆಣಕಿದರೆ ಪಾಕಿಸ್ತಾನ ಭೂಪಟದಲ್ಲಿ ಉಳಿಯಲ್ಲ: ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನದ 9 ಉಗ್ರರ ತರಬೇತಿ ಕೇಂದ್ರಗಳ ಮೇಲೆ ದಾಳಿ ಮಾಡಿ ಸುಮಾರು 80ಕ್ಕೂ ಅಧಿಕ ಉಗ್ರರನ್ನು ಕೇವಲ 25 ನಿಮಿಷದಲ್ಲಿ ಕೊಂದು ನಮ್ಮ ಯೋಧರು ಮರಳಿ ಭಾರತಕ್ಕೆ ಬಂದಿದ್ದು ಭಾರತ ದೇಶದ ಜನತೆಗೆ ಹೆಮ್ಮೆ ತಂದಿದೆ

ನರಗುಂದ: ಭಾರತ ಮೊದಲು ಶಾಂತಿ ಬಯಸುತ್ತದೆ, ವೈರಿ ದೇಶ ನಮ್ಮನ್ನು ಕೆಣಕಿದರೆ ನಿಮ್ಮ ದೇಶ ಭೂಪಟದಲ್ಲಿ ಉಳಿಯುವದಿಲ್ಲ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮ ಕಾಶ್ಮೀರದ ಪಹಲ್ಗಾಮ್‌ ದಲ್ಲಿ ಪ್ರವಾಸಕ್ಕೆ ಹೋದ ಪ್ರವಾಸಿಗರ ಮೇಲೆ ನಾಲ್ವರು ಉಗ್ರರರು ಧರ್ಮದ ಆಧಾರದ ಮೇಲೆ ಬಟ್ಟೆ ಬಿಚ್ಚಿಸಿ ಗುಂಡು ಹಾರಿಸಿ ಕೊಂದಿದ್ದರು. ಪತಿ ಕಳೆದುಕೊಂಡ ಮಹಿಳೆಯೊಬ್ಬಳು ನಮ್ಮನು ಕೊಂದು ಬಿಡಿ ಎಂದು ಹೇಳಿದಾಗ ಉಗ್ರರರು ನೀನು ಹೋಗಿ ಮೋದಿಗೆ ಹೇಳಿ ಎಂದಿದ್ದರು. ಅಂದು ಪ್ರಧಾನಿ ನರೇಂದ್ರ ಮೋದಿ ಸೇನೆಯ ಮೂವರು ದಂಡ ನಾಯಕರು, ರಕ್ಷಣಾ, ಹಣಕಾಸು ಸಚಿವರು, ರಕ್ಷಣಾ ಸಲಹೆಗಾರ ಅಜೀತ ಡೋವಲರ ಸೇರಿದಂತೆ ಅನೇಕರ ಜತೆ ಸರಣಿ ಸಭೆ ನಡೆಸಿ ಬುಧವಾರ ಬೆಳಗಿನ ಜಾವ 1 ಗಂಟೆಗೆ ಪಾಕಿಸ್ತಾನದ 9 ಉಗ್ರರ ತರಬೇತಿ ಕೇಂದ್ರಗಳ ಮೇಲೆ ದಾಳಿ ಮಾಡಿ ಸುಮಾರು 80ಕ್ಕೂ ಅಧಿಕ ಉಗ್ರರನ್ನು ಕೇವಲ 25 ನಿಮಿಷದಲ್ಲಿ ಕೊಂದು ನಮ್ಮ ಯೋಧರು ಮರಳಿ ಭಾರತಕ್ಕೆ ಬಂದಿದ್ದು ಭಾರತ ದೇಶದ ಜನತೆಗೆ ಹೆಮ್ಮೆ ತಂದಿದೆ ಎಂದರು.

ಈಗಾಗಲೇ ಜಲ,ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ವ್ಯಾಪಾರ ವಹಿವಾಟು ನಿರ್ಬಂಧ ಹೇರಿದ್ದರಿಂದ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತ ಹೊಡತೆ ನಮ್ಮ ಪ್ರಧಾನಿ ನೀಡಿದ್ದಾರೆ. ಇಷ್ಟಕ್ಕೆ ಪಾಕಿಸ್ತಾನ ಸುಮ್ಮನಾಗದಿದ್ದರೆ ಮುಂದಿನ ದಿನಗಳಲ್ಲಿ ಪ್ರಧಾನಿಗಳು ಈ ದೇಶವನ್ನು ಭೂಪಟದಲ್ಲಿ ಉಳಿಯದಂತೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ದೇಶದ ವಿಷಯ ಬಂದಾಗ ಕಾಂಗ್ರೆಸ್‌ ನಾಯಕರು ಪಾಕಿಸ್ತಾನದ ಪರ ಹೇಳಿಕೆ ನೀಡುತ್ತಿರುವುದು ಖಂಡನೀಯ. ಶೀಘ್ರ ಪಾಕಿಸ್ತಾನದಲ್ಲಿ ಅಲ್ಲಿಯ ಆಡಳಿತದ ವಿರುದ್ಧ ಜನ ದಂಗೆ ಎದ್ದು ಅಲ್ಲಿ ಸೇನಾ ಆಡಳಿತ ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಜ್ಜಪ್ಪ ಹುಡೇದ, ಬಿ.ಬಿ. ಐನಾಪೂರ, ಬಾಬುಗೌಡ ತಿಮ್ಮನಗೌಡ್ರ, ರಮೇಶಗೌಡ ಕರಕನಗೌಡ್ರ, ಎಸ್.ಆರ್. ಪಾಟೀಲ, ಎಸ್.ಬಿ.ಕರಿಗೌಡ್ರ, ಚಂದ್ರಶೇಖರ ದಂಡಿನ, ನಿಂಗಣ್ಣ ಗಾಡಿ, ಶಿವಪ್ಪ ಬೋಳಶಟ್ಟಿ, ಪ್ರಶಾಂತ ಜೋಶಿ, ರಾಚನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಬಸನಗೌಡ ಪಾಟೀಲ, ಮಹೇಶರಯ್ಯ ಸುರೇಬಾನ, ಪ್ರಕಾಶಗೌಡ ತಿರಕನಗೌಡ್ರ, ಶಿವಾನಂದ ಯಲಬಳ್ಳಿ, ಹನಮಂತ ಹದಗಲ್, ಅನೀಲ ಧರಿಯಣ್ಣವರ, ಬಿ.ಎಂ. ಕುರಗಣ್ಣವರ, ಕೊಟ್ರೀಶ ಕೊಟ್ರಶೆಟ್ಟರ ಸೇರಿದಂತೆ ಮುಂತಾದವರು ಇದ್ದರು.