ವಾಯುವ್ಯ ಪಾಕಿಸ್ತಾನದ ಕೋಹತ್‌ ಜಿಲ್ಲೆಯ ಪೊಲೀಸ್ ಲೈನ್ಸ್‌ ಬಳಿಯ ಮಸೀದಿಯೊಂದರಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸುವ ವೇಳೆ ಸಂಭವಿಸಿದ ಪ್ರಬಲ ಆತ್ಮಾಹುತಿ ದಾಳಿಯಲ್ಲಿ 16 ಪೊಲೀಸರು ಸೇರಿ 21 ಮಂದಿ ಮೃತಪಟ್ಟಿದ್ದಾರೆ.

ಪೇಶಾವರ: ವಾಯುವ್ಯ ಪಾಕಿಸ್ತಾನದ ಕೋಹತ್‌ ಜಿಲ್ಲೆಯ ಪೊಲೀಸ್ ಲೈನ್ಸ್‌ ಬಳಿಯ ಮಸೀದಿಯೊಂದರಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸುವ ವೇಳೆ ಸಂಭವಿಸಿದ ಪ್ರಬಲ ಆತ್ಮಾಹುತಿ ದಾಳಿಯಲ್ಲಿ 16 ಪೊಲೀಸರು ಸೇರಿ 21 ಮಂದಿ ಮೃತಪಟ್ಟಿದ್ದಾರೆ.

ಕೋಹತ್‌ನಲ್ಲಿಯ ಹಳೆಯ ಪೊಲೀಸ್‌ ಲೈನ್ಸ್‌ ಬಳಿ

ಖೈಬರ್‌ ಫಖ್ತುಂಖ್ವಾ ರಾಜಧಾನಿ ಪೇಶಾವರದಿಂದ 60 ಕಿ.ಮೀ. ದೂರದ ಕೋಹತ್‌ನಲ್ಲಿಯ ಹಳೆಯ ಪೊಲೀಸ್‌ ಲೈನ್ಸ್‌ ಬಳಿಯ ಮಸೀದಿಯಲ್ಲಿ ಲಾರಿಯನ್ನು ಮಸೀದಿಗೆ ದಿಕ್ಕಿ ಹೊಡೆಸಿ ಸ್ಫೋಟಿಸಲಾಗಿದೆ. ಇತ್ತೆಹಾದ್-ಉಲ್-ಮುಜಾಹಿದ್ದೀನ್ ಪಾಕಿಸ್ತಾನ್ ಎಂಬ ಸಂಘಟನೆ ಘಟನೆಯ ಹೊಣೆ ಹೊತ್ತಿದೆ ಎಂದು ಪೊಲೀಸ್‌ ಅಧಿಕಾರಿ ಜುಲ್ಫಿಕರ್ ಹಮೀದ್ ಹೇಳಿದ್ದಾರೆ.

ದಾಳಿಯಲ್ಲಿ ಗಾಯಗೊಂಡ ಸುಮಾರು 50 ಮಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ದಾಳಿಯ ಮಾಹಿತಿ ದೊರೆಯುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಪಾಕ್‌ ಇಂಧನ ಬಿಕ್ಕಟ್ಟು :ಮದುವೇಲ್ಲಿ ಇನ್ನು ಒಂದೇ ವಿಧದ ಅಡುಗೆ

ಇಸ್ಲಾಮಾಬಾದ್‌: ಮಧ್ಯಪ್ರಾಚ್ಯದಲ್ಲಿ ಮತ್ತೆ ಕಾವೇರುತ್ತಿರುವ ಉದ್ವಿಗ್ನತೆಯ ಪರಿಣಾಮ ಪಾಕಿಸ್ತಾನದಲ್ಲಿ ಇಂಧನ ತತ್ವಾರ ತಲೆದೋರಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಹಲವು ನಿಯಮಗಳನ್ನು ವಿಧಿಸಲಾಗಿದೆ. ಇದರಡಿ ಹೊಸ ಸರ್ಕಾರಿ ವಾಹನಗಳ ಖರೀದಿಯನ್ನು ನಿಷೇಧಿಸಿರುವ ಸರ್ಕಾರ, ದೇಶದಲ್ಲಾಗುವ ಎಲ್ಲಾ ಮದುವೆಗಳಲ್ಲಿ ಕೇವಲ ಒಂದು ವಿಧದ ಅಡುಗೆ ಮಾಡಬೇಕು ಎಂದು ಅಪ್ಪಣೆ ಮಾಡಿದೆ.

ಉಳಿದಂತೆ, 3 ತಿಂಗಳುಗಳ ಕಾಲ ಸರ್ಕಾರಿ ವಾಹನಗಳಿಗೆ ಹಂಚಲಾಗುವ ಇಂಧನದ ಪ್ರಮಾಣ ಶೇ.50ರಷ್ಟು ಇಳಿಕೆ, ಅಧಿಕಾರಿಗಳ ವಿದೇಶ ಪ್ರವಾಸಗಳನ್ನು ನಿಷೇಧಿಸಿ, ಅಗತ್ಯ ಸಭೆಗಳನ್ನು ಆನ್‌ಲೈನ್‌ ಮೂಲಕ ನಡೆಸುವುದು, ರಾತ್ರಿ 9 ಗಂಟೆಯೊಳಗೆ ಅಂಗಡಿ, ಮಾರುಕಟ್ಟೆ, ಮಾಲ್‌ ಮತ್ತು ವಾಣಿಜ್ಯ ಕೇಂದ್ರಗಳನ್ನು ಮುಚ್ಚುವುದು ಸೇರಿದಂತೆ ಇಂಧನ ಉಳಿತಾಯಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.