ಸಾರಾಂಶ
ಅಮೆರಿಕದ ಟೆಕ್ಸಾಸ್‌ನಲ್ಲಿ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಭಾರತೀಯರು ಸಜೀವ ದಹನವಾಗಿದ್ದಾರೆ. ಮೃತರು ಕಾರ್ ಪೂಲಿಂಗ್ ಆ್ಯಪ್ ಬಳಸಿಕೊಂಡು ಬೆಂಟನ್‌ವಿಲ್ಲೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ತೆಲಂಗಾಣದ ಆರ್ಯನ್ ರಘುಪತ್, ಫಾರೂಕ್ ಶೇಖ್, ಲೋಕೇಶ್, ತಮಿಳುನಾಡಿನ ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ.
ಈ ನಾಲ್ಕು ಮಂದಿ ಪರಸ್ಪರ ಅಪರಿಚಿತರಾಗಿದ್ದು, ಕಾರ್ ಪೂಲಿಂಗ್ ಆ್ಯಪ್ ಬಳಸಿಕೊಂಡು ಕಾರೊಂದರಲ್ಲಿ ಬೆಂಟನ್‌ವಿಲ್ಲೆಗೆ ತೆರಳುತ್ತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಟ್ರಕ್ ಹಿಂಬದಿಯಿಂದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಪಲ್ಟಿ ಹೊಡೆದು ಹೊತ್ತಿ ಉರಿದಿದೆ. ಕಾರಿನಲ್ಲಿ ನಾಲ್ವರು ಸುಟ್ಟು ಕರಕಲಾಗಿದ್ದಾರೆ.ಆರ್ಯನ್ ಬೆಂಟನ್‌ವಿಲ್ಲೆಯಲ್ಲಿರುವ ತನ್ನ ಮನೆಗೆ ಹಿಂದಿರುಗಲು, ಫಾರುಖ್ ತನ್ನ ಸ್ನೇಹಿತನನ್ನು ಭೇಟಿ ಮಾಡಲು, ಲೋಕೇಶ್ ತನ್ನ ಪತ್ನಿ ಭೇಟಿಗಾಗಿ ಹಾಗೂ ಚಿಕ್ಕಪ್ಪನ ಮನೆಗೆ ತರೆಳಲು ದರ್ಶಿನಿ ಕಾರ್‌ಪೂಲಿಂಗ್ ಮುಖಾಂತರ ಕ್ಯಾಬ್ ಬುಕ್ ಮಾಡಿದ್ದರು ಎಂಬುದು ಗೊತ್ತಾಗಿದೆ.