ಮಧ್ಯಾಹ್ನ 12.30ರೊಳಗೆ ಎನ್‌ಡಿಎ 400ರ ಗಡಿ ದಾಟಲಿದೆ: ಶಾ ವಿಶ್ವಾಸ

| Published : May 03 2024, 01:00 AM IST

ಮಧ್ಯಾಹ್ನ 12.30ರೊಳಗೆ ಎನ್‌ಡಿಎ 400ರ ಗಡಿ ದಾಟಲಿದೆ: ಶಾ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370 ಮತ್ತು ಒಟ್ಟಾರೆ ಎನ್‌ಡಿಎ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಗುರಿ ಯೋಜಿತ ರೀತಿಯಲ್ಲೇ ಮುನ್ನಡೆಯತ್ತಿದೆ.

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370 ಮತ್ತು ಒಟ್ಟಾರೆ ಎನ್‌ಡಿಎ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಗುರಿ ಯೋಜಿತ ರೀತಿಯಲ್ಲೇ ಮುನ್ನಡೆಯತ್ತಿದೆ. ಫಲಿತಾಂಶದ ದಿನವಾದ ಜೂ.4ರಂದು ಮಧ್ಯಾಹ್ನ 12.30ರ ವೇಳೆಗೆ ನಾವು ಈ ಗುರಿ ಮುಟ್ಟಲಿದ್ದೇವೆ ಎಂದು ಹಿರಿಯ ಬಿಜೆಪಿ ನಾಯಕ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಶಾ, ‘ನಮ್ಮ ಪಕ್ಷದ ತಂಡ ಮತ್ತು ನಾನು ವಿಸ್ರೃತವಾದ ಅಧ್ಯಯನ ನಡೆಸಿದ್ದೇವೆ. ನಮ್ಮ ಲೆಕ್ಕಾಚಾರದ ಪ್ರಕಾರ ಮೊದಲ ಎರಡು ಹಂತದಲ್ಲಿ ನಾವು 100ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಮತ್ತು ಮೂರನೇ ಹಂತದ ಚುನಾವಣೆಯಲ್ಲೂ ಅದೇ ವಿಶ್ವಾಸದತ್ತ ಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ.