ದೇಶದ 41 ಏರ್‌ಪೋರ್ಟ್‌ಗಳಿಗೆ ಹುಸಿ ಬಾಂಬ್‌ ಬೆದರಿಕೆ

| Published : Jun 19 2024, 01:09 AM IST

ಸಾರಾಂಶ

ದೇಶದ 41 ವಿಮಾನ ನಿಲ್ದಾಣಗಳಿಗೆ ಮಂಗಳವಾರ ಮಧ್ಯಾಹ್ನ ಏಕಕಾಲದಲ್ಲಿ ಹುಸಿ ಬಾಂಬ್‌ ಕರೆ ಬಂದು ಆತಂಕ ಸೃಷ್ಟಿಸಿದೆ.

ನವದೆಹಲಿ: ದೇಶದ 41 ವಿಮಾನ ನಿಲ್ದಾಣಗಳಿಗೆ ಮಂಗಳವಾರ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದು ಆತಂಕ ಮೂಡಿದ ಪ್ರಸಂಗ ನಡೆದಿದೆ. ಆದರೆ ವ್ಯಾಪಕ ತಪಾಸಣೆಯ ಬಳಿಕ ಇದು ಹುಸಿ ಬಾಂಬ್‌ ಬೆದರಿಕೆ ಎಂದು ಸಾಬೀತಾಗಿದೆ.ಪ್ರಾಥಮಿಕ ತನಿಖೆಗಳ ಪ್ರಕಾರ, ಸುಮಾರು 12.40 ಗಂಟೆಗೆ ರಾಷ್ಟ್ರವ್ಯಾಪಿ 41 ವಿಮಾನ ನಿಲ್ದಾಣಗಳಿಗೆ ಬೆದರಿಕೆಯನ್ನು ರವಾನಿಸಿದ್ದಾರೆ. ಪಟನಾ, ಕೊಯಮತ್ತೂರು, ಜೈಪುರ, ನಾಗಪುರ ಏರ್‌ಪೋರ್ಟ್‌ಗಳೂ ಇದರಲ್ಲಿ ಸೇರಿವೆ. ಕೆಲವು ವಿಮಾನಗಳಲ್ಲೂ ಬಾಂಬ್‌ ಇದೆ ಎಂದು ಬೆದರಿಕೆ ಬಂದಿತ್ತು.

ಈ ಸಾಮೂಹಿಕ ಬೆದರಿಕೆಯ ಬಳಿಕ ಏರ್‌ಪೋರ್ಟ್‌ಗಳನ್ನು ಸಂಪೂರ್ಣ ಜಾಲಾಡಲಾಯಿತು. ಆದರೆ ಯಾವುದೇ ಸ್ಫೋಟಕ ಪತ್ತೆ ಆಗಿಲ್ಲ. ಹೀಗಾಗಿ ಇದು ಹುಸಿ ಬೆದರಿಕೆ ಎಂದು ಸಾಬೀತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.