ಏಕಕಾಲಕ್ಕೆ 5 ಏಮ್ಸ್‌ ಉದ್ಘಾಟಿಸಿದ ಮೋದಿ: ಇದೇ ಮೊದಲು

| Published : Feb 26 2024, 01:37 AM IST / Updated: Feb 26 2024, 11:45 AM IST

ಏಕಕಾಲಕ್ಕೆ 5 ಏಮ್ಸ್‌ ಉದ್ಘಾಟಿಸಿದ ಮೋದಿ: ಇದೇ ಮೊದಲು
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ಮೊದಲ ಬಾರಿಗೆ ದೇಶದಲ್ಲಿ ಏಕಕಾಲಕ್ಕೆ 5 ಏಮ್ಸ್‌ ಉದ್ಘಾಟನೆ ಮಾಡಲಾಯಿತು. ಅಲ್ಲದೆ ಕಳೆದ 10 ದಿನಗಳಲ್ಲಿ 7 ಏಮ್ಸ್‌ಗಳನ್ನು ಉದ್ಘಾಟಿಸಲಾಗಿದೆ.

ರಾಜ್‌ಕೋಟ್‌: ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಭಾನುವಾರದಂದು ಏಕಕಾಲಕ್ಕೆ 5 ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಆಸ್ಪತ್ರೆ ಹಾಗೂ ಕಾಲೇಜುಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಗುಜರಾತ್‌ನ ರಾಜಕೋಟ್, ಪಂಜಾಬ್‌ನ ಬಠಿಂಡಾ, ಉತ್ತರ ಪ್ರದೇಶದ ರಾಯ್‌ಬರೇಲಿ, ಪ.ಬಂಗಾಳದ ಕಲ್ಯಾಣಿ ಮತ್ತು ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ಏಮ್ಸ್‌ ಸ್ಥಾಪನೆ ಆಗಿವೆ.

ಈ ವೇಳೆ ಮಾತನಾಡಿದ ಪ್ರಧಾನಿ, ‘ನರೇಂದ್ರ ಮೋದಿಯ ಗ್ಯಾರಂಟಿಗಳು ಇತರರ ಮೇಲೆ ಭರವಸೆ ಮಸುಕಾದಾಗ ಪ್ರಾರಂಭ ಆಗುತ್ತದೆ. 

ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳಲ್ಲಿ ಕೇವಲ 7 ಏಮ್ಸ್‌ಗಳಿಗೆ ಅನುಮೋದನೆ ಕೊಡಲಾಗಿತ್ತು. ಈಗ 10 ದಿನಗಳೊಳಗೆ 10 ಹೊಸ ಏಮ್ಸ್‌ ಶಾಖೆಗಳನ್ನು ಉದ್ಘಾಟಿಸಲಾಗಿದೆ.

 ಇದೇ ರೀತಿ ಭಾರತದಲ್ಲಿ ಅಭಿವೃದ್ಧಿಯ ಶಕೆ ಅತ್ಯಂತ ವೇಗವಾಗಿ ಮುಂದುವರೆಯಲಿದೆ’ ಎಂದರು.