ಲಡಾಖ್‌: ಒಂದೇ ಕುಟುಂಬದ 5 ಮಂದಿ ಸದಸ್ಯರಿಗಾಗಿ ಮತದಾನ ಕೇಂದ್ರ ಸ್ಥಾಪನೆ

| Published : Apr 30 2024, 02:21 AM IST / Updated: Apr 30 2024, 04:51 AM IST

ಲಡಾಖ್‌: ಒಂದೇ ಕುಟುಂಬದ 5 ಮಂದಿ ಸದಸ್ಯರಿಗಾಗಿ ಮತದಾನ ಕೇಂದ್ರ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಲೇಹ್‌ ಜಿಲ್ಲೆಯ ವಾಶಿ ಎಂಬ ಕುಗ್ರಾಮದಲ್ಲಿ ವಾಸವಿರುವ ಒಂದೇ ಕುಟುಂಬದ 5 ಮಂದಿ ಸದಸ್ಯರಿಗಾಗಿ ಚುನಾವಣಾಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ.

ಶ್ರೀನಗರ: ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಲೇಹ್‌ ಜಿಲ್ಲೆಯ ವಾಶಿ ಎಂಬ ಕುಗ್ರಾಮದಲ್ಲಿ ವಾಸವಿರುವ ಒಂದೇ ಕುಟುಂಬದ 5 ಮಂದಿ ಸದಸ್ಯರಿಗಾಗಿ ಚುನಾವಣಾಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ.

 ಈ ಬಗ್ಗೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಯತೀಂಧ್ರ ಎಂ ಮಾರಲ್ಕರ್‌, ವಾಶಿ ಕುಗ್ರಾಮವು ಲೇಹ್‌ನಿಂದ 170 ಕಿಲೋಮೀಟರ್‌ ದೂರದಲ್ಲಿದೆ. ಅಲ್ಲಿ ರೈತರೊಬ್ಬರ ಕುಟುಂಬ ವಾಸವಿದ್ದು, ಅದರಲ್ಲಿ ಇಬ್ಬರು ಪುರುಷ ಮತದಾರರು ಮತ್ತು ಮೂವರು ಮಹಿಳಾ ಮತದಾರರಿದ್ದಾರೆ. 

ಶೇ.100 ರಷ್ಟು ಮತದಾನ ಮಾಡಿಸುವ ನಿಟ್ಟಿನಲ್ಲಿ ಕುಗ್ರಾಮದಲ್ಲಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು. ಲಡಾಖ್‌ನಲ್ಲಿ ಐದನೇ ಹಂತದಲ್ಲಿ ಮೇ.20ರಂದು ಮತದಾನ ನಡೆಯಲಿದೆ.