ಸಾರಾಂಶ
ನವದೆಹಲಿ: ದೇಶದ ಬಾಲಾರೋಪಿಗಳ ನ್ಯಾಯ ಮಂಡಳಿಯ ನಿಧಾನಗತಿಯ ಪ್ರಕ್ರಿಯೆಯಿಂದಾಗಿ ದೇಶದಲ್ಲಿ 50000ಕ್ಕೂ ಹೆಚ್ಚು ಮಕ್ಕಳು ಬಾಲಾರೋಪಿ ಕೇಂದ್ರಗಳಲ್ಲೇ ಕೊಳೆಯುತ್ತಿದ್ದಾರೆ. ಹೀಗೆ ಪ್ರಕರಣ ಬಾಕಿ ಉಳಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಕಳವಳ ವ್ಯಕ್ತಪಡಿಸಿದೆ.
50000ಕ್ಕೂ ಹೆಚ್ಚು ಮಕ್ಕಳು ಬಾಲಾರೋಪಿಗಳ ಕೇಂದ್ರದಲ್ಲಿ
ಬಾಲಾರೋಪಿಗಳ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ 2 ವರ್ಷಗಳ ಹಿಂದೆ ಹೊಸ ಕಾಯ್ದೆ ರೂಪುಗೊಂಡಿದೆ. ಇಂಥ 362 ನ್ಯಾಯಮಂಡಳಿಗಳಲ್ಲಿ ಒಟ್ಟು 1 ಲಕ್ಷಕ್ಕೂ ಅಧಿಕ ಕೇಸು ದಾಖಲಾಗಿದ್ದು, ಈ ಪೈಕಿ ಪ್ರಕರಣಗಳ ಕಾಲಮಿತಿಯಲ್ಲಿ ಇತ್ಯರ್ಥವಾಗದೇ 50000ಕ್ಕೂ ಹೆಚ್ಚು ಮಕ್ಕಳು ಬಾಲಾರೋಪಿಗಳ ಕೇಂದ್ರದಲ್ಲಿ ಉಳಿಯುವಂತಾಗಿದೆ.
ಶೇ.55ರಷ್ಟು ಪ್ರಕರಣ ಬಾಕಿ
ಒಟ್ಟು ದಾಖಲಾದ ಪ್ರಕರಣಗಳ ಪೈಕಿ ದೇಶವ್ಯಾಪಿ ಶೇ.55ರಷ್ಟು ಪ್ರಕರಣ ಬಾಕಿ ಉಳಿದಿದ್ದರೆ, ರಾಜ್ಯವಾರು ಒಡಿಶಾದಲ್ಲಿ ಅತಿಹೆಚ್ಚು ಶೇ.83 ಮತ್ತು ಕರ್ನಾಟಕದಲ್ಲಿ ಶೇ.35ರಷ್ಟು ಕೇಸು ವಿಚಾರಣೆಗೆ ಬಾಕಿ ಇದೆ. ಪರಿಪೂರ್ಣವಾದ ಪೀಠ ಇಲ್ಲದಿರುವುದು, ಸರಿಯಾದ ಕಾನೂನು ಸೇವಾ ಕೇಂದ್ರವಿಲ್ಲದಿರುವುದು ಮತ್ತು ಅಪರಿಪೂರ್ಣ ಮೂಲಸೌಕರ್ಯ, ಜಡ್ಜ್‌ಗಳ ಕೊರತೆ ಇದಕ್ಕೆ ಕಾರಣ ಎಂದು ವರದಿ ಹೇಳಿದೆ.

;Resize=(128,128))
;Resize=(128,128))
;Resize=(128,128))
;Resize=(128,128))