9999 ಫ್ಯಾನ್ಸಿ ಕಾರ್‌ ನಂಬರ್‌ ₹25 ಲಕ್ಷಕ್ಕೆ ಖರೀದಿ!

| Published : May 22 2024, 01:00 AM IST / Updated: May 22 2024, 06:41 AM IST

ಸಾರಾಂಶ

ಕಳೆದ ಬಾರಿ ₹21.6 ಲಕ್ಷಕ್ಕೆ ಬಿಡ್‌ ಆಗಿದ್ದ 9999 ಸಂಖ್ಯೆಯ ಫ್ಯಾನ್ಸಿ ನಂಬರ್‌ ಈ ಬಾರಿ 25.5 ಲಕ್ಷ ರು.ಗೆ ಮಾರಾಟವಾಗಿದೆ.

ಹೈದರಾಬಾದ್‌: ಅಚ್ಚುಮೆಚ್ಚಿನ ಕಾರ್‌ ಖರೀದಿಸಿದ ಮಾಲೀಕರು ತಮಗೆ ಅದೃಷ್ಟ ತರುವ ಮತ್ತು ಫ್ಯಾನ್ಸಿ ನೋಂದಣಿ ಸಂಖ್ಯೆಯೂ ಬೇಕೆಂದು ಬಯಸುವುದು ಮಾಮೂಲು. ಅದೇ ರೀತಿ ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ವಾಹನಕ್ಕೆ ಸ್ವಂತ ಇಚ್ಛೆಯುಳ್ಳ ಫ್ಯಾನ್ಸಿ ನಂಬರ್‌ (9999) ಪಡೆಯಲು 25.5 ಲಕ್ಷ ರು. ಬಿಡ್ ಮಾಡಿ ಖರೀದಿ ಮಾಡಿದ್ದಾನೆ.

ಈ ಕುರಿತು ಹೈದರಾಬಾದ್‌ ಜಂಟಿ ಸಾರಿಗೆ ಆಯುಕ್ತ ಸಿ ರಮೇಶ್‌ ಮಾಹಿತಿ ನೀಡಿದ್ದು, ‘9999 ಫ್ಯಾನ್ಸಿ ನಂಬರ್‌ ಪಡೆಯಲು 11 ಜನರು ಬಿಡ್‌ ಮಾಡಿದ್ದರು. ಅದರಲ್ಲಿ ಅತಿ ಹೆಚ್ಚಿನ ಬಿಡ್‌ 25,50,002 ರು.ಗೆ ಕೂಗಿ ಮಾರಾಟವಾಗಿದೆ. ಕಳೆದ ಬಾರಿ ಇದೇ ಫ್ಯಾನ್ಸಿ ನಂಬರ್‌ಗೆ 21.6 ಲಕ್ಷ ರು. ಬಿಡ್‌ ಮಾಡಲಾಗಿತ್ತು’ ಎಂದು ತಿಳಿಸಿದರು.

ಇದೇ ವೇಳೆ ಖೈರತಾಬಾದಿನ ಸಾರಿಗೆ ರಸ್ತೆ ಸಾರಿಗೆ ಆಯೋಗವು ಈ ರೀತಿ ಫ್ಯಾನ್ಸಿ ನಂಬರ್‌ ಬಿಡ್‌ ಮಾಡುವ ಮೂಲಕ ಒಂದೇ ದಿನ 43 ಲಕ್ಷ ರು. ಆದಾಯ ಗಳಿಸಿದೆ.