ಕಳೆದ ಮೇನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರವನ್ನು ಪಾಕ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸೀಂ ಮುನೀರ್‌, ಘಜ್ವಾ-ಎ-ಹಿಂದ್ ಎಂದು ಕರೆದಿದ್ದರು. ಷರಿಯಾ ಕಾನೂನಿನ ಅನ್ವಯ ಇದರ ಅರ್ಥ ಇಸ್ಲಾಮಿಕ್‌ ಕಾನೂನನ್ನು ಜಾರಿಗೊಳಿಸಲು ನಡೆಸುವ ಸಶಸ್ತ್ರ ಹೋರಾಟ ಅಥವಾ ಜಿಹಾದ್ ಎಂದು ಜೈಷ್‌ ಎ ಮೊಹಮ್ಮದ್‌ ಉಗ್ರಸಂಘಟನೆಯ ಕಮಾಂಡರ್‌ ಒಬ್ಬ ಹೇಳಿಕೊಂಡಿದ್ದಾನೆ.

-ಷರಿಯಾ ಜಾರಿಗೆ ಪಾಕ್‌ ಸಶಸ್ತ್ರ ಪಡೆ ಮುಖ್ಯಸ್ಥ ಆದೇಶ

ಇಸ್ಲಾಮಾಬಾದ್‌: ಕಳೆದ ಮೇನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರವನ್ನು ಪಾಕ್‌ ಸಶಸ್ತ್ರ ಪಡೆಗಳ ಮುಖ್ಯಸ್ಥ ಆಸೀಂ ಮುನೀರ್‌, ಘಜ್ವಾ-ಎ-ಹಿಂದ್ ಎಂದು ಕರೆದಿದ್ದರು. ಷರಿಯಾ ಕಾನೂನಿನ ಅನ್ವಯ ಇದರ ಅರ್ಥ ಇಸ್ಲಾಮಿಕ್‌ ಕಾನೂನನ್ನು ಜಾರಿಗೊಳಿಸಲು ನಡೆಸುವ ಸಶಸ್ತ್ರ ಹೋರಾಟ ಅಥವಾ ಜಿಹಾದ್ ಎಂದು ಜೈಷ್‌ ಎ ಮೊಹಮ್ಮದ್‌ ಉಗ್ರಸಂಘಟನೆಯ ಕಮಾಂಡರ್‌ ಒಬ್ಬ ಹೇಳಿಕೊಂಡಿದ್ದಾನೆ.

ರಾವಲ್ಕೋಟ್‌ನಲ್ಲಿ ಸಂಘಟನೆಯ ಕಮಾಂಡರ್‌ಗಳನ್ನುದ್ದೇಶಿಸಿ ಮಾತನಾಡಿದ ಉಗ್ರ ಇಲ್ಯಾಸ್‌ ಕಾಶ್ಮೀರಿ, ‘ಯುದ್ಧ ಪ್ರಾರಂಭವಾದ ತಕ್ಷಣ ಶಸ್ತ್ರಾಸ್ತ್ರಗಳು ಹೊರಬಂದವು, ಫೈಟರ್ ಜೆಟ್‌ಗಳು ಡಿಕ್ಕಿ ಹೊಡೆದವು, ಟ್ಯಾಂಕ್‌ಗಳು ಮುಖಾಮುಖಿಯಾದವು. ಕಮಾಂಡರ್ (ಮುನೀರ್‌) ಇದು ಘಜ್ವತ್-ಉಲ್-ಹಿಂದ್, ಇದು ಬನ್ಯನ್ ಅಲ್ ಮರ್ಸೂಸ್ ಎಂದು ಘೋಷಿಸಿದರು. ನಮ್ಮ ಹೆಸರು, ಗುರುತು, ಧ್ಯೇಯವಾಕ್ಯ ಜಿಹಾದ್. ಸರ್ಕಾರ ನಮ್ಮೊಂದಿಗಿದ್ದಾಗಲೂ ಇಲ್ಲದಿದ್ದಾಗಲೂ ನಮ್ಮ ಗುರಿ ಜಿಹಾದ್. ನಾವು ಜಿಹಾದ್ ನಡೆಸಿ ಕಾಶ್ಮೀರವನ್ನು ಮುಕ್ತಗೊಳಿಸುತ್ತೇವೆ’ ಎಂದಿದ್ದಾನೆ.