ಇಬ್ಬರು ಮಕ್ಕಳ ತಂದೆ ಪ್ರಶಾಂತ್‌ ಶ್ರೀಕುಮಾರ್‌ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟ ಈ ಘಟನೆ ನಡೆದದ್ದು ಭಾರತದಲ್ಲೆಲ್ಲೂ ಅಲ್ಲ, ಬದಲಾಗಿ ಕೆನಡಾದಲ್ಲಿ. ಎಡ್ಮೋಂಟನ್‌ನ ಗ್ರೇ ನನ್ಸ್‌ ಕಮ್ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರಶಾಂತ್‌ ಡಿ.22ರಂದು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಟೊರೊಂಟೋ: ಅಪ್ಪಾ ಈ ನೋವು ತಡೆಯೋಕೆ ಆಗ್ತಿಲ್ಲ. ಎಂಟು ಗಂಟೆಯಿಂದ ಸರ್ಕಾರಿ ಆಸ್ಪತ್ರೆ ಎಮರ್ಜೆನ್ಸಿ ರೂಂ ಮುಂದೆ ಸೂಕ್ತ ಚಿಕಿತ್ಸೆ ಸಿಗದೆ ಕೂತಿದ್ದ 44 ವರ್ಷದ ಪುತ್ರ ಎದೆ ಮೇಲೆ ಕೈಇಟ್ಟುಕೊಂಡು ತಂದೆ ಮುಂದೆ ಗೋಗರೆಯುತ್ತಿದ್ದರು.

ರಕ್ತದೊತ್ತಡ ಮಿತಿಮೀರಿ ಕೊನೆಯುಸಿರೆಳೆದರು

 ಒಂದು ಹಂತದಲ್ಲಿ ರಕ್ತದೊತ್ತಡ ಮಿತಿಮೀರಿ ಕೊನೆಗೆ ಆತನನ್ನು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದ ಕೆಲವೇ ಸೆಕೆಂಡುಗಳಲ್ಲಿ ತಂದೆ ಕಣ್ಣೆದುರೇ ಪುತ್ರ ಕುಸಿತು ಬಿದ್ದು ಕೊನೆಯುಸಿರೆಳೆದರು. 

ಘಟನೆ ನಡೆದದ್ದು ಭಾರತದಲ್ಲೆಲ್ಲೂ ಅಲ್ಲ, ಬದಲಾಗಿ ಕೆನಡಾದಲ್ಲಿ

ಇಬ್ಬರು ಮಕ್ಕಳ ತಂದೆ ಪ್ರಶಾಂತ್‌ ಶ್ರೀಕುಮಾರ್‌ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟ ಈ ಘಟನೆ ನಡೆದದ್ದು ಭಾರತದಲ್ಲೆಲ್ಲೂ ಅಲ್ಲ, ಬದಲಾಗಿ ಕೆನಡಾದಲ್ಲಿ. ಎಡ್ಮೋಂಟನ್‌ನ ಗ್ರೇ ನನ್ಸ್‌ ಕಮ್ಯುನಿಟಿ ಆಸ್ಪತ್ರೆ(ಸರ್ಕಾರಿ ಆಸ್ಪತ್ರೆ)ಗೆ ದಾಖಲಾಗಿದ್ದ ಪ್ರಶಾಂತ್‌ ಡಿ.22ರಂದು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಪ್ರಶಾಂತ್‌ ಈ ಸಾವು ಇದೀಗ ಕೆನಡಾದ ಆರೋಗ್ಯ ವ್ಯವಸ್ಥೆ ಮೇಲೆ ಗಂಭೀರ ಪ್ರಶ್ನೆ ಏಳುವಂತೆ ಮಾಡಿದೆ. ಈ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ. ತೀವ್ರ ಎದೆನೋವು ಕಾರಣ ಆಸ್ಪತ್ರೆಗೆ ಬಂದಿದ್ದ ಪ್ರಶಾಂತ್‌ರನ್ನು ವಿಶ್ರಾಂತಿ ಕೊಠಡಿಯಲ್ಲಿ ಕೂರಿಸಲಾಗಿತ್ತು. ಅವರು ಪದೇ ಪದೆ ತೀವ್ರ ಎದೆನೋವು ಬಗ್ಗೆ ದೂರಿದರೂ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಲಿಲ್ಲ. 8 ಗಂಟೆ ಕಳೆದ ಬಳಿಕ ಬಿಪಿ ಮಿತಿಮೀರಿದಾಗ ತಕ್ಷಣ ಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತಾದರೂ ಅಲ್ಲೇ ಅವರು ಕುಸಿದು ಬಿದ್ದು ಮೃತಪಟ್ಟರು.