ಸಾರಾಂಶ
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ತಮಗೆ ಕಿರುಕುಳ ನೀಡಿ ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ಆರೋಪಿಸಿ, ಕಾರ್ಯನಿರ್ವಾಹಕ ನಿರ್ಮಾಪಕ ಉಪ್ಪಳಪತಿ ಶ್ರೀನಿವಾಸ್ ರಾವ್ (55) ಅವರು ಮೆಟ್ಟುಗುಡ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ತಮಗೆ ಕಿರುಕುಳ ನೀಡಿ ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ಆರೋಪಿಸಿ, ಕಾರ್ಯನಿರ್ವಾಹಕ ನಿರ್ಮಾಪಕ ಉಪ್ಪಳಪತಿ ಶ್ರೀನಿವಾಸ್ ರಾವ್ (55) ಅವರು ಮೆಟ್ಟುಗುಡ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಈ ಸಂಬಂಧ ಸೆಲ್ಫಿ ವಿಡಿಯೋ ಒಂದನ್ನು ಮಾಡಿದ ರಾವ್, ‘1990ರಿಂದ 2007ರ ವರೆಗೆ ರಾಜಮೌಳಿಯೊಂದಿಗೆ ಒಳ್ಳೆ ಸ್ನೇಹವಿತ್ತು. ಬಳಿಕ ಹೆಂಗಸೊಬ್ಬಳ ವಿಚಾರವಾಗಿ ನಮ್ಮ ನಡುವೆ ವಾಗ್ವಾದ ಶುರುವಾಯಿತು. ನಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದು, ಆಕೆಯಿಂದ ದೂರವಾಗುವಂತೆ ರಾಜಮೌಳಿ ಒತ್ತಾಯಿಸಿದರು. ಮೊದಮೊದಲು ಒಪ್ಪದ ನಾನು ಬಳಿಕ ಒಪ್ಪಿದೆ.
ಈ ವಿಷಯವನ್ನು ನಾನು ಬೇರೆಯವರೆದುರು ಹೇಳಿರಬಹುದೆಂದು ಶಂಕಿಸಿ ಅವರು ಕಿರುಕುಳ ಕೊಡತೊಡಗಿದರು. ನನ್ನ ವೃತ್ತಿಜೀವನವನ್ನೇ ಹಾಳು ಮಾಡಿದರು. ಅವರಿಂದಾಗಿ ನಾನು ಒಬ್ಬಂಟಿಯಾಗಿ ಬದುಕಬೇಕಾಯಿತು. ಆತ್ಮಹತ್ಯೆ ಬಿಟ್ಟರೆ ನನ್ನ ಬಳಿ ಬೇರೆ ಆಯ್ಕೆಯಿಲ್ಲ’ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಲು ರಾಜಮೌಳಿ ನಿರಾಕರಿಸಿದ್ದಾರೆ.