ರೈಲಿನಲ್ಲೇ ತ್ರಿವಳಿ ತಲಾಖ್‌ ನೀಡಿ ಪರಾರಿಯಾದ ಪತಿ!

| Published : May 04 2024, 01:31 AM IST / Updated: May 04 2024, 05:04 AM IST

ಸಾರಾಂಶ

ಚಲಿಸುತ್ತಿರುವ ರೈಲಿನಲ್ಲೇ ತನ್ನ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ, ಮುಂದಿನ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿರುವ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಝಾನ್ಸಿ: ಚಲಿಸುತ್ತಿರುವ ರೈಲಿನಲ್ಲೇ ತನ್ನ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ, ಮುಂದಿನ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿರುವ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮೊಹಮ್ಮದ್‌ ಅರ್ಶದ್‌ ಮತ್ತು ಅಫ್ಸಾನಾ ಎಂಬುವವರು ಜ.12ರಂದು ವಿವಾಹವಾಗಿದ್ದರು. ಬಳಿಕ ಅರ್ಶದ್‌ ಅವರ ಕಾನ್ಪುರದ ಮನೆಗೆ ತನ್ನ ಪತ್ನಿಯನ್ನು ಕರೆದೊಯ್ದು ಅಲ್ಲಿ ತನಗೆ ಇನ್ನೊಂದು ಮದುವೆಯಾಗಿರುವುದನ್ನು ತಿಳಿಸಿದ್ದ. ಜೊತೆಗೆ ಆರ್ಶದ್‌ನ ಕುಟುಂಬಸ್ಥರು ಅಫ್ಸಾನಾಗೆ ವರದಕ್ಷಿಣೆಗೆ ಕಿರುಕುಳ ಪ್ರಾರಂಭಿಸಿದ್ದರು.

ಬಳಿಕ ಏ.29ರಂದು ಪತಿ ತಾನು ಕೆಲಸ ಮಾಡುತ್ತಿದ್ದ ಭೋಪಾಲ್‌ಗೆ ತನ್ನ ಪತ್ನಿ ಅಫ್ಸಾನಾ ಜೊತೆಗೆ ರೈಲಲ್ಲಿ ತೆರಳುವಾಗ ತ್ರಿವಳಿ ತಲಾಖ್‌ ಹೇಳಿ ಪರಾರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಅಫ್ಸಾನಾ ಪೊಲೀಸರಿಗೆ ದೂರು ನೀಡಿದ್ದು, ಪತಿಯ ಕುಟುಂಬಸ್ಥರ ಮೇಲೆ ಪ್ರಕರಣ ದಾಖಲಿಸಿ ಅಫ್ಸಾನಾರನ್ನು ಅವರ ತವರಿಗೆ ಕಳುಹಿಸಿ ಕೊಡಲಾಗಿದೆ.