ಕುಡಿದ ಮತ್ತಿನಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪ!

| Published : May 21 2024, 01:51 AM IST / Updated: May 21 2024, 05:19 AM IST

ಕುಡಿದ ಮತ್ತಿನಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪ!
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿದ ಮತ್ತಿನಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ಕೇರಳದ ಪಟ್ಟಣಂತಿಟ್ಟದಲ್ಲಿ ನಡೆದಿದೆ.

ಪಟ್ಟಣಂತಿಟ್ಟ (ಕೇರಳ): ವ್ಯಕ್ತಿಯೊಬ್ಬನು ಕುಡಿದ ಅಮಲಿನಲ್ಲಿ ಇಲ್ಲಿನ ರಸ್ತೆ ಬದಿಯ ಕಾಲುವೆಯಲ್ಲಿ ಸಾಗುತ್ತಿದ್ದ ಹೆಬ್ಬಾವನ್ನು ಹಿಡಿದು ಕೊರಳಿಗೆ ಸುತ್ತಿಕೊಂಡಿದ್ದಾನೆ.

ಈತನ ವಿರುದ್ಧ ಅರಣ್ಯಾಧಿಕಾರಿಗಳು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬನು ಭಾನುವಾರ ಆಡೂರು ಬಳಿಯ ಬಾರ್‌ ಮುಂದೆ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಹೆಬ್ಬಾವನ್ನು ಹಿಡಿದು ತನ್ನ ಕೊರಳಿ ಹಾಕಿಕೊಂಡಿದ್ದಾನೆ.

ಇದರಿಂದ ಸ್ಥಳೀಯರು ಭಯಭೀತರಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದು, ಹೆಬ್ಬಾವನ್ನು ರಕ್ಷಿಸಿ ಕೊನ್ನಿಯ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.