ಪತ್ನಿ ಕೊಂದು, 3 ದಿನ ಕುಕ್ಕರ್ರಲ್ಲಿ ಶವ ಬೇಯಿಸಿ ಕೆರೆಗೆಸೆದ ಸೈನಿಕ - ಭೀಕರ ಘಟನೆ ಬೆಳಕಿಗೆ

| Published : Jan 24 2025, 08:54 AM IST

meerut crime news

ಸಾರಾಂಶ

ಮಾಜಿ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಆಕೆಯ ದೇಹದ ಭಾಗಗಳನ್ನು ಕತ್ತರಿಸಿ, ಕುಕ್ಕರ್‌ನಲ್ಲಿ ಬೇಯಿಸಿ ಬಳಿಕ ಆಕೆಯ ಶವದ ತುಂಡುಗಳನ್ನು ಕೆರೆಗೆ ಎಸೆದು ನೀಚತನ ಮೆರೆದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಶವದ ತುಂಡುಗಳಿಗೆ ಈಗ ಪೊಲೀಸರು ಶೋಧ ಆರಂಭಿಸಿದ್ದಾರೆ.

 ಹೈದರಾಬಾದ್: ಮಾಜಿ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಆಕೆಯ ದೇಹದ ಭಾಗಗಳನ್ನು ಕತ್ತರಿಸಿ, ಕುಕ್ಕರ್‌ನಲ್ಲಿ ಬೇಯಿಸಿ ಬಳಿಕ ಆಕೆಯ ಶವದ ತುಂಡುಗಳನ್ನು ಕೆರೆಗೆ ಎಸೆದು ನೀಚತನ ಮೆರೆದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಶವದ ತುಂಡುಗಳಿಗೆ ಈಗ ಪೊಲೀಸರು ಶೋಧ ಆರಂಭಿಸಿದ್ದಾರೆ.

35 ವರ್ಷದ ವೆಂಕಟ ಮಾಧವಿ ಮೃತ ಮಹಿಳೆ. ಆಕೆ ಜನವರಿ 16ರಂದು ನಾಪತ್ತೆಯಾಗಿದ್ದಳು. ಪತಿಯೊಂದಿಗೆ ಜಗಳವಾಡಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದು, ಮರಳಿ ಬಂದಿಲ್ಲ ಎಂದು ಆಕೆಯ ಪೋಷಕರು ಜ.18ರಂದು ಸ್ಥಳೀಯ ಮೀರ್‌ಪೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗ ಮಹಿಳೆ ಪತಿ ಗುರುಮೂರ್ತಿ ಕೂಡ ಠಾಣೆಗೆ ಆಗಮಿಸಿದ್ದರು. ದೂರಿನ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಮಹಿಳೆ ಪತಿ ಗುರು ಮೂರ್ತಿಯನ್ನು ಅನುಮಾನದ ಮೇರೆಗೆ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಾಯಿಬಿಟ್ಟಿದ್ದಾನೆ.

ತುಂಡರಿಸಿ ಬೇಯಿಸಿದ!

ಗುರು ಮೂರ್ತಿ ತನ್ನ ಹೆಂಡತಿಯನ್ನು ಕೊಂದು ಬಾತ್‌ ರೂಂನಲ್ಲಿ ಶವವನ್ನು ಕತ್ತರಿಸಿದ. ಬಳಿಕ ಕತ್ತರಿಸಿದ ದೇಹದ ಭಾಗಗಳನ್ನು ಕುಕ್ಕರ್‌ನಲ್ಲಿ ಹಾಕಿ ಬೇಯಿಸಿದ. ಆ ಬಳಿಕ ಮೂಳೆಗಳನ್ನು ಪ್ರತ್ಯೇಕಿಸಿದ. ನಂತರ ಮತ್ತೆ ಅದನ್ನು ಪುಡಿ ಮಾಡಿ ಕುದಿಸಿದ. 3 ದಿನಗಳ ಕಾಲ ಮಾಂಸ ಮತ್ತು ಮೂಳೆಗಳನ್ನು ಹಲವು ಸಲ ಬೇಯಿಸಿದ.

‘ಆ ಬಳಿಕ ಹೀಗೆ ಬೇಯಿಸಿದ ಮಾಂಸವನ್ನು ಚೀಲದಲ್ಲಿ ಸುತ್ತಿ ಕೆರೆಯಲ್ಲಿ ಎಸೆದಿದ್ದೇನೆ ಎಂದು ಆತ ಹೇಳಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ,

ಆದರೆ ಕೆರೆಯಲ್ಲಿ ಈವರೆಗೂ ಪೊಲೀಸರಿಗೆ ಇದುವರೆಗೆ ಮಹಿಳೆಯ ಶವ ಸಿಕ್ಕಿಲ್ಲ.ಬೇರೆ ಯಾವುದೇ ಸುಳಿವು ಕೂಡ ದೊರೆತಿಲ್ಲ. ಇದು ತನಿಖೆಗೆ ತೊಡಕಾಗಿದೆ. ಹೀಗಾಗಿ ಗುರುಮೂರ್ತಿ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಕೊಲೆಗೆ ಏನು ಕಾರಣ?:

ಗಂಡ ಹೆಂಡತಿ ಆಗಾಗ ಜಗಳವಾಡುತ್ತಿದ್ದರು. ಅದೇ ಜಗಳ ವಿಕೋಪಕ್ಕೆ ತಿರುಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪತಿ ಗುರುಮೂರ್ತಿ ನಿವೃತ್ತ ಸೈನಿಕನಾಗಿದ್ದ. ಪ್ರಸ್ತುತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದನು.