ಸಾರಾಂಶ
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು, ಪ್ರಿಯಕರನ ಜೊತೆ ಸೇರಿ, ಪತಿಯನ್ನು ಹತ್ಯೆಗೈದು ಬಳಿಕ ಶವವನ್ನು ಮನೆಯಲ್ಲಿ ಟೈಲ್ಸ್ ಕೆಳಗೆ ಹಾಕಿ ಮುಚ್ಚಿಹಾಕಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ. ದೃಶ್ಯಂ ಸಿನಿಮಾ ಕಥೆ ಹೋಲುವ ಘಟನೆ ನೆರೆಹೊರೆಯ ಜನರಲ್ಲಿ ಆಘಾತ ಮೂಡಿಸಿದೆ.
ಮಹಾರಾಷ್ಟ್ರದಲ್ಲಿ ದೃಶ್ಯಂ ಮಾದರಿ ಹತ್ಯೆ
ಮುಂಬೈ: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು, ಪ್ರಿಯಕರನ ಜೊತೆ ಸೇರಿ, ಪತಿಯನ್ನು ಹತ್ಯೆಗೈದು ಬಳಿಕ ಶವವನ್ನು ಮನೆಯಲ್ಲಿ ಟೈಲ್ಸ್ ಕೆಳಗೆ ಹಾಕಿ ಮುಚ್ಚಿಹಾಕಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ. ದೃಶ್ಯಂ ಸಿನಿಮಾ ಕಥೆ ಹೋಲುವ ಘಟನೆ ನೆರೆಹೊರೆಯ ಜನರಲ್ಲಿ ಆಘಾತ ಮೂಡಿಸಿದೆ.ವಿಜಯ್ ಚವಾಣ್ ಎಂಬಾತ 15 ದಿನಗಳಿಂದ ನಾಪತ್ತೆಯಾಗಿದ್ದ. ಸೋಮವಾರ ಆತನ ಸಹೋದರು ಆತನ ಮನೆಗೆ ಭೇಟಿ ನೀಡಿದ ವೇಳೆ ನೆಲದ ಕೆಲವು ಟೈಲ್ಸ್‌ಗಳು ಇತರ ಟೈಲ್ಸ್‌ಗಳ ಬಣ್ಣದೊಂದಿಗೆ ತಾಳೆಯಾಗದೇ ಇರುವುದನ್ನು ನೋಡಿದ್ದಾರೆ. ಇದು ಅವರ ಅನುಮಾನಕ್ಕೆ ಕಾರಣವಾಗಿ ಟೈಲ್ಸ್‌ಗಳನ್ನು ತೆಗೆದು ನೋಡಿದ್ದಾರೆ, ಈ ವೇಳೆ ಅವರಿಗೆ ಹೂತಿದ್ದ, ವಾಸನೆ ಬರುತ್ತಿದ್ದ ಶವ ಪತ್ತೆಯಾಗಿದ್ದು, ಕೂಡಲೇ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.
ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು ಕೋಮಲಾರೇ ಆಕೆಯ ಪ್ರಿಯಕರ, ಪಕ್ಕದ ಮನೆಯ ಮನು ಜೊತೆ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇಬ್ಬರ ನಡುವಿನ ಅನೈತಿಕ ಸಂಬಂಧ ಇದಕ್ಕೆ ಕಾರಣ ಎನ್ನುವ ಅನುಮಾನ ವ್ಯಕ್ತವಾಗಿದೆ. ಸದ್ಯ ಕೋಮಲಾ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಪೊಲೀಸರು ಪತ್ತೆಗೆ ಬಲೆ ಬೀಸಿದ್ದಾರೆ.