ದಿಲ್ಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಕೊಲ್ಲಲು ಬಿಜೆಪಿ ಸಂಚು ನಡೆಸುತ್ತಿದೆ: ಆಪ್‌ ಆರೋಪ

| Published : Oct 27 2024, 02:22 AM IST / Updated: Oct 27 2024, 05:01 AM IST

ಸಾರಾಂಶ

ದಿಲ್ಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಮೇಲೆ ಶುಕ್ರವಾರ ನಡೆದ ಹಲ್ಲೆ ಘಟನೆ ಬಗ್ಗೆ ಕಿಡಿಕಾರಿರುವ ಆಪ್‌ ಸಂಸದ ಸಂಜಯ ಸಿಂಗ್‌ ‘ಕೇಜ್ರಿವಾಲ್‌ ಅವರನ್ನು ಕೊಲ್ಲಲು ಬಿಜೆಪಿ ಸಂಚು ರೂಪಿಸುತ್ತಿದ್ದು, ಪೊಲೀಸರೂ ಅವರೊಂದಿಗೆ ಸೇರಿದ್ದಾರೆ  ಎಂದಿದ್ದಾರೆ.

ನವದೆಹಲಿ: ದಿಲ್ಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ಮೇಲೆ ಶುಕ್ರವಾರ ನಡೆದ ಹಲ್ಲೆ ಘಟನೆ ಬಗ್ಗೆ ಕಿಡಿಕಾರಿರುವ ಆಪ್‌ ಸಂಸದ ಸಂಜಯ ಸಿಂಗ್‌ ‘ಕೇಜ್ರಿವಾಲ್‌ ಅವರನ್ನು ಕೊಲ್ಲಲು ಬಿಜೆಪಿ ಸಂಚು ರೂಪಿಸುತ್ತಿದ್ದು, ಪೊಲೀಸರೂ ಅವರೊಂದಿಗೆ ಸೇರಿದ್ದಾರೆ. ಕೇಜ್ರಿವಾಲ್‌ ಜೀವಕ್ಕೆ ಸಂಚಕಾರ ಬಂದರೆ ಅದಕ್ಕೆ ಬಿಜೆಪಿಯೇ ಹೊಣೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ವಿಪಕ್ಷ ನಾಯಕ ವಿಜೇಂದ್ರ ಗುಪ್ತಾ, ‘ಇದು ಚುನಾವಣೆಗೂ ಮುನ್ನ ಬಿಜೆಪಿಯ ಹೆಸರು ಕೆಡಿಸಲು ಆಪ್‌ ಆಡುತ್ತಿರುವ ನಾಟಕ’ ಎಂದು ವ್ಯಂಗ್ಯವಾಡಿದ್ದಾರೆ.

ದೆಹಲಿಯ ವಿಕಾಸಪುರಿಯಲ್ಲಿ ಪಾದಯಾತ್ರೆ ವೇಳೆ ಬಿಜೆಪಿಯ ಗೂಂಡಾಗಳು ಝಡ್‌ ಪ್ಲಸ್‌ ಭದ್ರತೆ ಹೊಂದಿರುವ ಕೇಜ್ರಿವಾಲ್‌ ಮೇಲೆ ದಾಳಿ ನಡೆಸಿದ್ದರು ಎಂದು ಆಪ್‌ ಶುಕ್ರವಾರ ಆರೋಪಿಸಿತ್ತು. ಆದರೆ ಇದಕ್ಕೆ ಸಾಕ್ಷಿಯಾಗಿದೇ ಯಾವುದೇ ವಿಡಿಯೋಗಳಿಲ್ಲ ಹಾಗೂ ಪಕ್ಷವೂ ಅಧಿಕೃತ ದೂರು ದಾಖಲಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅತ್ತ ಸಚಿವ ಸೌರಭ್‌ ಭಾರದ್ವಾಜ್‌ ಮಾತನಾಡಿ, ಬಿಜೆಪಿಯ ದೆಹಲಿ ಯುವ ಮೋರ್ಚಾದ ಉಪಾಧ್ಯಕ್ಷ ಕೂಡ ದಾಳಿಕೋರರಲ್ಲಿ ಒಬ್ಬರಾಗಿದ್ದರು ಎಂದು ಆರೋಪಿಸಿದ್ದಾರೆ.