4 ರಾಜ್ಯಗಳಲ್ಲಿ ಆಪ್‌-ಕಾಂಗ್ರೆಸ್ ಸೀಟು ಹಂಚಿಕೆ ಅಂತಿಮ?

| Published : Feb 24 2024, 02:32 AM IST / Updated: Feb 24 2024, 08:17 AM IST

Congress, AAP
4 ರಾಜ್ಯಗಳಲ್ಲಿ ಆಪ್‌-ಕಾಂಗ್ರೆಸ್ ಸೀಟು ಹಂಚಿಕೆ ಅಂತಿಮ?
Share this Article
  • FB
  • TW
  • Linkdin
  • Email

ಸಾರಾಂಶ

ಆಮ್‌ ಆದ್ಮಿ ಪಕ್ಷವು ಕಾಂಗ್ರೆಸ್‌ನೊಂದಿಗೆ ಬಹುತೇಕ ತನ್ನ ಸಿಟು ಹಂಚಿಕೆಯನ್ನು ಅಂತಿಮಗೊಳಿಸಿದೆ ಎಂದು ಹೇಳಲಾಗಿದ್ದು, ತನ್ನ ಮಾತರ ರಾಜ್ಯ ದೆಹಲಿಯಲ್ಲಿ ಕಾಂಗ್ರೆಸ್‌ಗೆ 3 ಕ್ಷೇತ್ರಗಳನ್ನು ಬಿಟ್ಟುಕೊಡಲಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಬಿಜೆಪಿ ಸರ್ಕಾರವನ್ನು ಕೆಡವಲು ರಚಿಸಲಾಗಿರುವ ಇಂಡಿಯಾ ಕೂಟದ ಆಪ್‌ ಹಾಗೂ ಕಾಂಗ್ರೆಸ್‌ ನಾಲ್ಕು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಅಂತಿಮಗೊಳಿಸಿದೆ ಎಂದು ಹೇಳಲಾಗಿದೆ.

ಈ ಪೈಕಿ ದೆಹಲಿಯ7 ಕ್ಷೇತ್ರಗಳಲ್ಲಿ ಆಪ್‌ 4, ಕಾಂಗ್ರೆಸ್‌ 3 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಇನ್ನು ಗೋವಾದಲ್ಲಿ ಒಂದು ಆಪ್‌ ಹಾಗೂ ಇನ್ನೊಂದರಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ.

ಗುಜರಾತ್‌ನಲ್ಲಿ 2 ಕ್ಷೇತ್ರದಲ್ಲಿ ಆಪ್‌ ಹಾಗೂ ಮಿಕ್ಕ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ ಮಾಡಲಿದೆ.

ಹರ್ಯಾಣದಲ್ಲಿ ಆಪ್‌ 1 ಸೀಟು ಹಾಗೂ ಕಾಂಗ್ರೆಸ್‌ 9 ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯಲಿದೆ.

ಇದರೊಂದಿಗೆ ಚಂಡೀಗಢದ ಏಕೈಕ ಲೋಕಸಭೆ ಕ್ಷೇತ್ರದಲ್ಲಿ ಆಪ್‌ ಕಣಕ್ಕಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.