ಆಪ್ತನಿಗೆ ಹೇಳಿ ಕೇಜ್ರಿವಾಲ್‌ ನನಗೆ ಹೊಡೆಸಿದ್ದಾರೆ: ಆಪ್‌ ಸಂಸದೆ ಸ್ವಾತಿ!

| Published : May 14 2024, 01:04 AM IST / Updated: May 14 2024, 04:49 AM IST

ಆಪ್ತನಿಗೆ ಹೇಳಿ ಕೇಜ್ರಿವಾಲ್‌ ನನಗೆ ಹೊಡೆಸಿದ್ದಾರೆ: ಆಪ್‌ ಸಂಸದೆ ಸ್ವಾತಿ!
Share this Article
  • FB
  • TW
  • Linkdin
  • Email

ಸಾರಾಂಶ

ಅರವಿಂದ್‌ ಕೇಜ್ರಿವಾಲ್‌ ತನ್ನ ಆಪ್ತ ಭೀಬವ್‌ ಕುಮಾರ್‌ಗೆ ಸೂಚಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ದೂರಿದ್ಧಾರೆ.

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತನ್ನ ಆಪ್ತನಿಗೆ ಹೇಳಿ ನನ್ನನ್ನು ಹೊಡೆಸಿದ್ದಾರೆ ಎಂದು ಆಪ್‌ ರಾಜ್ಯಸಭಾ ಸಂಸದೆ ಹಾಗೂ ದೆಹಲಿ ಮಹಿಳಾ ಅಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ವಾತಿ ಮಲಿವಾಲ್‌, ‘ನಾನು ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿ ನಿವಾಸಕ್ಕೆ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಲೆಂದು ಹೋಗಿದ್ದೆ. ಈ ಸಮಯದಲ್ಲಿ ಕೇಜ್ರಿವಾಲ್‌ ಅವರ ಆಪ್ತ ಬೀಭವ್‌ ಕುಮಾರ್‌ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಿಸಲು ನಿರಾಕರಿಸಿದ್ದಾರೆ. 

ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದು ಹಲ್ಲೆ ನಡೆಸಿದ್ದಾರೆ. ಕೇಜ್ರಿವಾಲ್‌ ಅವರೇ ತನ್ನ ಆಪ್ತನಿಗೆ ಹೇಳಿ ಹೊಡಿಸಲು ಸಂಚು ರೂಪಿಸಿದ್ದಾರೆ’ ಎಂದು ತಿಳಿಸಿದ್ದಾರೆ.ಇದರ ಬೆನ್ನಲ್ಲೇ ತನಿಖೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗವು ತನ್ನ ತಂಡವೊಂದನ್ನು ಸಿಎಂ ನಿವಾಸಕ್ಕೆ ಕಳುಹಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.