‘ನಾನು ಎನ್‌ಡಿಎ ಕೂಟದಲ್ಲಿಯೇ ಉಳಿಯುತ್ತೇನೆ. ಎಲ್ಲಿಗೂ ಹೋಗಲ್ಲ’ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

ಪಟನಾ: ‘ನಾನು ಎನ್‌ಡಿಎ ಕೂಟದಲ್ಲಿಯೇ ಉಳಿಯುತ್ತೇನೆ. ಎಲ್ಲಿಗೂ ಹೋಗಲ್ಲ’ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

‘ನಿತೀಶ್‌ ಇಂಡಿಯಾ ಕೂಟಕ್ಕೆ ಬರುವುದಿದ್ದರೆ ಸ್ವಾಗತ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್ ಹೇಳಿಕೆಗೆ ಬಿಹಾರ ಸಿಎಂ ಪ್ರತಿಕ್ರಿಯಿಸಿ, ‘ನಾನು ಎನ್‌ಡಿಎ ಜೊತೆಗೆ ಉಳಿದುಕೊಳ್ಳುತ್ತೇನೆ. ನಾವು ಎರಡು ಸಲ ಆಕಸ್ಮಿಕವಾಗಿ ಅಲೆದಾಡಿದ್ದೇವೆ. ಮತ್ತೆ ಎಲ್ಲಿಗೂ ಹೋಗಲ್ಲ’ ಎಂದಿದ್ದಾರೆ.ಮೊನ್ನೆ ಲಾಲು ಅವವರು ‘ನಿತೀಶ್ ಇಂಡಿಯಾ ಕೂಟಕ್ಕೆ ಮರಳುವುದಾದರೆ ಅವರನ್ನು ಕ್ಷಮಿಸಿ, ಸ್ವಾಗತಿಸಿಕೊಳ್ಳುತ್ತೇವೆ. ನಮ್ಮ ಬಾಗಿಲು ಮುಕ್ತವಾಗಿದೆ. ನಿತೀಶ್‌ ತಮ್ಮ ಗೇಟ್‌ ತೆರೆಯಬೇಕು. ಅವರ ಹಳೆಯ ತಪ್ಪುಗಳನ್ನು ಕ್ಷಮಿಸುವುದು ನನ್ನ ಕರ್ತವ್ಯ’ ಎಂದಿದ್ದರು.