ಸಾರಾಂಶ
ಭಾರತದ ಪಾಲಿಗೆ ಈ ವರ್ಷದ ಮೇ ಸಾಮಾನ್ಯಕ್ಕಿಂತ ಹೆಚ್ಚು ಶಾಖದ ಅನುಭವವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನವದೆಹಲಿ: ಭಾರತದ ಪಾಲಿಗೆ ಈ ವರ್ಷದ ಮೇ ಸಾಮಾನ್ಯಕ್ಕಿಂತ ಹೆಚ್ಚು ಶಾಖದ ಅನುಭವವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂತೆಯೇ, ಆಗೀಗ ಬೀಳುವ ಮಳೆಯು ತಂಪನ್ನೆರೆದು, ಕಳೆದ ವರ್ಷದಂತೆ ತಾಪಮಾನ ಅತಿರೇಕ್ಕಕೆ ಹೋಗುವುದನ್ನು ತಪ್ಪಿಸಲಿದೆ ಎಂಬ ಶುಭ ಸುದ್ದಿಯನ್ನೂ ನೀಡಿದೆ.
ಇಲಾಖೆಯ ಮಹಾನಿರ್ದೇಶದ ಮೃತ್ಯುಂಜಯ ಮೋಹಪಾತ್ರ ಮಾತನಾಡಿ, ‘ಈ ಬಾರಿ, ರಾಜಸ್ಥಾನ, ಹರ್ಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯಕ್ಕಿಂದ ಅಧಿಕ(1ರಿಂದ 4) ದಿನಗಳಲ್ಲಿ ಉಷ್ಣ ಮಾರುತ ಇರಲಿದೆ.
ಉತ್ತರ ಕರ್ನಾಟಕ ಸೇರಿದಂತೆ ಗುಜರಾತ್, ಒಡಿಶಾ, ಛತ್ತೀಸ್‌ಗಢ, ಮಹಾರಾಷ್ಟ್ರ, ತೆಲಂಗಾಣದ ಕೆಲ ಭಾಗಗಳಲ್ಲೂ ಇದೇ ಪರಿಸ್ಥಿತಿ ಇರಲಿದೆ’ ಎಂದು ಹೇಳಿದ್ದಾರೆ.
ಅಂತೆಯೇ, ‘ಭಾರತದ ವಾಯವ್ಯ, ಮಧ್ಯ ಮತ್ತು ಈಶಾನ್ಯ ಪ್ರದೇಶಗಳನ್ನು ಹೊರತುಪಡಿಸಿ, ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಭಾರತದಲ್ಲಿ ಸರಾಸರಿ 64.1ಎಂಎಂ.ಗಿಂತ ಶೇ.109ರಷ್ಟು ಅಧಿಕವಾಗಿರಲಿದೆ’ ಎಂದರು. ಏಪ್ರಿಲ್‌ನಲ್ಲಿ ದೇಶದಲ್ಲಿ 72 ದಿನ ಉಷ್ಣಮಾರುತ ಇತ್ತು.