ಸಾರಾಂಶ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಪ್ರಮಾಣ ಸ್ವೀಕರಿಸಿದ 71 ಸಚಿವರಿಗೆ ಸೋಮವಾರ ಸಂಜೆ ಖಾತೆಗಳ ಹಂಚಿಕೆಯಾಗಿದ್ದು, ಮಂಗಳವಾರ ಬೆಳಗ್ಗೆ ಬಹುತೇಕ ಮಂದಿ ತಮ್ಮ ಇಲಾಖಾ ಕಚೇರಿಗಳಿಗೆ ತೆರಳಿ ಅಧಿಕಾರ ಸ್ವೀಕರಿಸಿದರು.
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಪ್ರಮಾಣ ಸ್ವೀಕರಿಸಿದ 71 ಸಚಿವರಿಗೆ ಸೋಮವಾರ ಸಂಜೆ ಖಾತೆಗಳ ಹಂಚಿಕೆಯಾಗಿದ್ದು, ಮಂಗಳವಾರ ಬೆಳಗ್ಗೆ ಬಹುತೇಕ ಮಂದಿ ತಮ್ಮ ಇಲಾಖಾ ಕಚೇರಿಗಳಿಗೆ ತೆರಳಿ ಅಧಿಕಾರ ಸ್ವೀಕರಿಸಿದರು.
ನಾರ್ತ್ ಬ್ಲಾಕ್‌ನಲ್ಲಿ ಹಣಕಾಸು ಸಚಿವಾಲಯದಲ್ಲಿ ನಿರ್ಮಲಾ ಸೀತಾರಾಮನ್ ವಿತ್ತ ಸಚಿವರಾಗಿ ಅಧಿಕಾರ ಸ್ವೀಕರಿಸಿದರೆ ಸೌತ್ ಬ್ಲಾಕ್‌ನಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ಎಸ್. ಜೈಶಂಕರ್ ಸತತ ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಇನ್ನುಳಿದಂತೆ ಸಂಪುಟದ ಸದಸ್ಯರು ಸಚಿವಾಲಯದಲ್ಲಿರುವ ತಮ್ಮ ಸಂಬಂಧಪಟ್ಟ ಇಲಾಖಾ ಕಚೇರಿಗಳಿಗೆ ತೆರಳಿ ಅಧಿಕಾರ ಸ್ವೀಕರಿಸಿದರು. ಸಚಿವರು ಮೊದಲ ದಿನದಿಂದಲೇ ಕೆಲಸ ಆರಂಭಿಸಿದ್ದು, ಮೊದಲ ಸಂಪುಟ ಸಭೆಯಲ್ಲಿ ಮಂಡಿಸಲಾದ 100 ದಿನಗಳ ಕಾರ್ಯಸೂಚಿಯನ್ನು ಜಾರಿಗೊಳಿಸಲು ಕ್ರಮವಹಿಸಿದ್ದಾರೆ.