ಸಮಾನತೆ ಸಾಧ್ಯವಾದರೆ ಕಾಂಗ್ರೆಸ್‌ ಪಕ್ಷ ಮೀಸಲು ರದ್ದು ಮಾಡಲಿದೆ. ಆದರೆ ಸದ್ಯ ಆ ಪರಿಸ್ಥಿತಿ ಇಲ್ಲ :ರಾಹುಲ್ ಗಾಂಧಿ

| Published : Sep 12 2024, 01:48 AM IST / Updated: Sep 12 2024, 05:19 AM IST

ಸಾರಾಂಶ

ಮೀಸಲಾತಿ ಕುರಿತ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ ಅವರು, ಕಾಂಗ್ರೆಸ್ ಪಕ್ಷ ಮೀಸಲು ಮಿತಿಯನ್ನು ಶೇ.50ಕ್ಕಿಂತ ಹೆಚ್ಚಿಸಲು ಕ್ರಮ ಜರುಗಿಸಲಿದೆ ಎಂದಿದ್ದಾರೆ.

ವಾಷಿಂಗ್ಟನ್‌: ‘ಸಮಾನತೆ ಸಾಧ್ಯವಾದರೆ ಕಾಂಗ್ರೆಸ್‌ ಪಕ್ಷ ಮೀಸಲು ರದ್ದು ಮಾಡಲಿದೆ. ಆದರೆ ಸದ್ಯ ಆ ಪರಿಸ್ಥಿತಿ ಇಲ್ಲ’ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ +ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ವಾಸ್ತವವಾಗಿ ಕಾಂಗ್ರೆಸ್‌ ಪಕ್ಷ ಮೀಸಲು ಮಿತಿಯನ್ನು ಶೇ.50ಕ್ಕಿಂತ ಹೆಚ್ಚಿಸಲು ಕ್ರಮ ಜರುಗಿಸಲಿದೆ’ ಎಂದಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಬುಧವಾರ ಸ್ಪಷ್ಟನೆ ನೀಡಿ, ‘ನಿನ್ನೆ ನಾನು ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ನನ್ನನ್ನು ಯಾರೋ ನಾನು ಮೀಸಲಾತಿ ವಿರೋಧಿ ಎಂದು ಕರೆದಿದ್ದಾರೆ. ಇದು ತಪ್ಪು ವ್ಯಾಖ್ಯಾನ. ನಾನು ಮೀಸಲಾತಿ ವಿರೋಧಿ ಅಲ್ಲ. ನಾವು ಶೇ.50ರ ಮಿತಿಯನ್ನು ಮೀರಿ ಮೀಸಲು ನೀಡುವ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.ಇತ್ತೀಚಿನ ಲೋಕಸಭೆ ಚುನಾವಣೆಯಲ್ಲೂ ರಾಹುಲ್‌, ‘ದೇಶದಲ್ಲಿ ಜಾತಿ ಗಣತಿ ಅಗತ್ಯ. ಅದರ ಫಲಿತಾಂಶ ಹೊರಬಂದರೆ ಮೀಸಲು ಮಿತಿಯನ್ನು ಈಗಿನ ಶೇ.50ಕ್ಕಿಂತ ಹೆಚ್ಚಿಸಲಾಗುವುದು’ ಎಂದಿದ್ದರು.