ಧರ್ಮೇಂದ್ರಗೆ ಖ್ಯಾತಿ ನೀಡಿದ ರಾಮನಗರದ ಶೋಲೆ ಚಿತ್ರ

| N/A | Published : Nov 25 2025, 01:15 AM IST

Sholay

ಸಾರಾಂಶ

ಧರ್ಮೇಂದ್ರಗೂ ರಾಮನಗರಕ್ಕೂ ವಿಶೇಷ ನಂಟಿತ್ತು. ಅಮಿತಾಭ್‌- ಧಮೇಂದ್ರ ಜೋಡಿಗೆ ಭಾರೀ ಖ್ಯಾತಿ ತಂದುಕೊಟ್ಟ ‘ಶೋಲೆ’ ಸಿನೆಮಾದ ಶೂಟಿಂಗ್‌ ನಡೆದಿದ್ದು ರಾಮನಗರದಲ್ಲಿ. ಧರ್ಮೇಂದ್ರ ‘ವೀರು’ ಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರವನ್ನು ರಾಮನಗರದ ರಾಮದೇವರ ಬೆಟ್ಟದಲ್ಲಿ ಎರಡು ವರ್ಷ ಕಾಲ ಚಿತ್ರೀಕರಿಸಲಾಗಿತ್ತು.

ಎಂ.ಅಫ್ರೋಜ್ ಖಾನ್

ರಾಮನಗರ : ಧರ್ಮೇಂದ್ರಗೂ ರಾಮನಗರಕ್ಕೂ ವಿಶೇಷ ನಂಟಿತ್ತು. ಅಮಿತಾಭ್‌- ಧಮೇಂದ್ರ ಜೋಡಿಗೆ ಭಾರೀ ಖ್ಯಾತಿ ತಂದುಕೊಟ್ಟ ‘ಶೋಲೆ’ ಸಿನೆಮಾದ ಶೂಟಿಂಗ್‌ ನಡೆದಿದ್ದು ರಾಮನಗರದಲ್ಲಿ. 

ಧರ್ಮೇಂದ್ರ ‘ವೀರು’ ಪಾತ್ರ

ಧರ್ಮೇಂದ್ರ ‘ವೀರು’ ಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರವನ್ನು ರಾಮನಗರದ ರಾಮದೇವರ ಬೆಟ್ಟದಲ್ಲಿ ಎರಡು ವರ್ಷ ಕಾಲ ಚಿತ್ರೀಕರಿಸಲಾಗಿತ್ತು.ಈ ಸಿನಿಮಾಗೆ ಸಲ್ಮಾನ್ ಖಾನ್ ತಂದೆ ಸಲೀಮ್ ಹಾಗೂ ಕಥೆ ಬರಹಗಾರ ಜಾವೇದ್ ಅಖ್ತರ್ ಅವರು ಕಥೆ ಬರೆದಿದ್ದರು. ಚಿತ್ರಕಥೆ ಪಕ್ಕಾ ಆದ ಮೇಲೆ ನಿರ್ದೇಶಕ ರಮೇಶ್ ಸಿಪ್ಪಿ ಅವರು ರಾಮನಗರದ ಬೆಟ್ಟಸಾಲನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡರು. 

ಸಿನಿಮಾದಲ್ಲಿನ ರಾಮಗಢ

ಸಿನಿಮಾದಲ್ಲಿನ ರಾಮಗಢ ಅಸಲಿಗೆ ಇದ್ದುದು ರಾಮದೇವರ ಬೆಟ್ಟದಲ್ಲಿ. ‘ಶೋಲೆ’ ಸಿನಿಮಾದ ಹೆಸರು ಕೇಳಿದಾಕ್ಷಣ ರಾಮದೇವರ ಬೆಟ್ಟ ನೆನಪಾಗುತ್ತದೆ. ಚಿತ್ರದಲ್ಲಿನ ಕಾಲ್ಪನಿಕ ಗ್ರಾಮ ರಾಮಘಡ್​ನ ನಿರ್ಮಾಣ ಸಿನಿಮಾದ ಚಿತ್ರೀಕರಣ ನಡೆದಿದ್ದು ರಾಮನಗರದಲ್ಲಿ. ಗಬ್ಬರ್ ಸಿಂಗ್​ನ ದೃಶ್ಯಗಳ ಚಿತ್ರೀಕರಣ ನಡೆದ ಈ ಬೆಟ್ಟ ಇವತ್ತಿಗೂ ಶೋಲೆ ಬೆಟ್ಟ ಎಂದೇ ಫೇಮಸ್​ ಆಗಿದೆ.

Read more Articles on