ವಯನಾಡ್‌ ಸಂತ್ರಸ್ತರಿಗೆ 3 ಕೋಟಿ : ಪ್ರಾದೇಶಿಕ ಸೇನೆಯ ಲೆಫ್ಟಿನೆಂಟ್‌ ಕರ್ನಲ್ ಮೋಹನ್‌ಲಾಲ್‌ ಘೋಷಣೆ

| Published : Aug 04 2024, 01:16 AM IST / Updated: Aug 04 2024, 05:03 AM IST

ಸಾರಾಂಶ

ಭಾರತೀಯ ಪ್ರಾದೇಶಿಕ ಸೇನೆಯ ಲೆಫ್ಟಿನೆಂಟ್‌ ಕರ್ನಲ್ ಆಗಿರುವ ನಟ ಮೋಹನ್‌ ಲಾಲ್ ಭೂಕುಸಿತದಿಂದ ನಲುಗಿರುವ ವಯನಾಡಿಗೆ ಸೇನಾ ಸಮವಸ್ತ್ರದಲ್ಲಿ ಭೇಟಿ ನೀಡಿದ್ದಾರೆ,

ವಯನಾಡು: ಭಾರತೀಯ ಪ್ರಾದೇಶಿಕ ಸೇನೆಯ ಲೆಫ್ಟಿನೆಂಟ್‌ ಕರ್ನಲ್ ಆಗಿರುವ ನಟ ಮೋಹನ್‌ ಲಾಲ್ ಭೂಕುಸಿತದಿಂದ ನಲುಗಿರುವ ವಯನಾಡಿಗೆ ಸೇನಾ ಸಮವಸ್ತ್ರದಲ್ಲಿ ಭೇಟಿ ನೀಡಿದ್ದಾರೆ, ಈ ವೇಳೆಯಲ್ಲಿ ರಕ್ಷಣಾ ಕಾರ್ಯದ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿದ ನಟ, ವಿಪತ್ತು ಪೀಡಿತ ಪ್ರದೇಶದ ದುರಸ್ತಿ ಕಾರ್ಯಕ್ಕೆ 3 ಕೋಟಿ ರು. ಪರಿಹಾರ ಘೋಷಿಸಿದ್ದಾರೆ.

 ಮೆಪ್ಪಾಡಿಯಲ್ಲಿರುವ ಸೇನಾ ಶಿಬಿರಕ್ಕೆ ಭೇಟಿ ನೀಡಿದ ಮೋಹನ್ ಲಾಲ್‌ ರಕ್ಷಣಾ ಕಾರ್ಯಾಚರಣೆಯ ಕುರಿತು ಅಧಿಕಾರಿಗಳ ಜೊತೆಗೆ ಕೆಲ ಕಾಲ ಚರ್ಚಿಸಿದರು. ಬಳಿಕ ಚೂರಲ್‌ಮಲ, ಮುಂಡಕ್ಕೈ, ಪುಂಚಿರಿಮಟ್ಟಂ ಸೇರಿದಂತೆ ಭೂಕುಸಿತ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿದರು. ಈ ವೇಳೆಯಲ್ಲಿ ರಕ್ಷಣಾ ಪಡೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಮೋಹನ್ ಲಾಲ್ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಗುರುತಿಸಿ, ಸರ್ಕಾರ 2009ರಲ್ಲಿ ಸೇನೆಯ ಲೆಫ್ಟಿನೆಂಟ್‌ ಕರ್ನಲ್ ಆಗಿ ನೇಮಿಸಿತ್ತು.