ಸಾರಾಂಶ
ಕೊಕೇನ್ ಖರೀದಿ ಆರೋಪದ ಮೇಲೆ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಸೋದರ ಹಾಗೂ ನಟ ಅಮನ್ ಪ್ರೀತ್ ಸಿಂಗ್‌ನನ್ನು ಹೈದರಾಬಾದ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಹೈದರಾಬಾದ್: ಕೊಕೇನ್ ಖರೀದಿ ಆರೋಪದ ಮೇಲೆ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಸೋದರ ಹಾಗೂ ನಟ ಅಮನ್ ಪ್ರೀತ್ ಸಿಂಗ್‌ನನ್ನು ಹೈದರಾಬಾದ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ತೆಲಂಗಾಣ ಮಾದಕ ವಸ್ತು ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಅಮನ್ ಸೇರಿ ಐವರು ಬಲೆಗೆ ಬಿದ್ದಿದ್ದಾರೆ. 2.6 ಕೇಜಿ ಕೊಕೇನ್‌ನನ್ನು ಹೈದರಾಬಾದ್‌ಗೆ ಮಾರಾಟ ಮಾಡಲು ತರುತ್ತಿರುವುದನ್ನು ಗಮನಿಸಿದ ಮಾದಕ ವಸ್ತು ನಿಗ್ರಹ ದಳ, ಈ ಜಾಲವನ್ನು ಭೇದಿಸಿ 30 ಗ್ರಾಹಕರ ಪಟ್ಟಿ ತಯಾರಿಸಿದೆ. ಈ ಪಟ್ಟಿಯಲ್ಲಿ ಅಮನ್ ಸೇರಿ ಐವರು ಆರೋಪಿಗಳು ಇದ್ದಾರೆ. ಇವರ ಮೂತ್ರ ಪರೀಕ್ಷೆಯಲ್ಲಿ ಎಲ್ಲರೂ ಡ್ರಗ್ಸ್ ಸೇವಿಸಿರುವುದು ಖಾತ್ರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.2021 ಹಾಗೂ 2022ರ ಡ್ರಗ್ಸ್ ದಂಧೆಗೆ ಸಂಬಂದಿಸಿದಂತೆ ನಟಿ ರಾಕುಲ್ ಪ್ರೀತ್‌ರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು.