ಹೀಟ್‌ ಸ್ಟ್ರೋಕ್‌: ನಟ ಶಾರುಖ್ ಆಸ್ಪತ್ರೆಗೆ ದಾಖಲು

| Published : May 23 2024, 01:10 AM IST / Updated: May 23 2024, 06:13 AM IST

ಸಾರಾಂಶ

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹೀಟ್ ಸ್ಟ್ರೋಕ್‌ನಿಂದಾಗಿ ಬುಧವಾರ ಇಲ್ಲಿನ ಕೆ.ಡಿ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಅಹಮದಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹೀಟ್ ಸ್ಟ್ರೋಕ್‌ನಿಂದಾಗಿ ಬುಧವಾರ ಇಲ್ಲಿನ ಕೆ.ಡಿ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಮಂಗಳವಾರ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ , ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ ರೈಸರ್ಸ್‌ ಹೈದರಬಾದ್ ನಡುವಿನ ಐಪಿಎಲ್ ಪಂದ್ಯಕ್ಕೆ ಶಾರುಖ್‌ ಖಾನ್ ಸಾಕ್ಷಿ ಆಗಿದ್ದರು. ಆ ಬಳಿಕ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು ಎಂದು ಮೂಲಗಳು ಹೇಳಿವೆ. ಅಹಮದಾಬಾದ್‌ನಲ್ಲಿ ಮಂಗಳವಾರ 45 ಡಿಗ್ರಿ ತಾಪಮಾನವಿತ್ತು.

ಶಾರುಖ್‌ ಆರೋಗ್ಯ ಸ್ಥಿರವಾಗಿದೆ. ಚಿಂತೆ ಪಡುವ ಅಗತ್ಯವಿಲ್ಲ. ಶಾರುಖ್‌ ಆರೋಗ್ಯ ವಿಚಾರಿಸಲು ಜೂಹಿ ಚಾವ್ಲಾ ಭೇಟಿ ನೀಡಿದ್ದರು ಎಂದು ಮೂಲಗಳು ಹೇಳಿವೆ. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ಭದ್ರತೆ ನೀಡಲಾಗಿದೆ.