ಸಾರಾಂಶ
ಸೈತಾನ್ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟಿ ಅರುಂಧತಿ ನಾಯರ್ ಚೆನ್ನೈನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಚೆನ್ನೈ: ಸೈತಾನ್ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟಿ ಅರುಂಧತಿ ನಾಯರ್ ಚೆನ್ನೈನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಅವರು ತೀವ್ರ ಗಾಯಗೊಂಡಿದ್ದು, ತೀವ್ರ ನಿಗಾಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ಅವರ ಸೋದರಿ ಆರತಿ ಮಾಹಿತಿ ನೀಡಿದ್ದಾರೆ. ಮಾ.14ರಂದು ಅರುಂಧತಿ ತಮ್ಮ ಸೋದರನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ನಡುವೆ ಅರುಂಧತಿ, ಆಸ್ಪತ್ರೆಯ ದೈನಂದಿನ ಖರ್ಚು ವೆಚ್ಚ ಭರಿಸಲು ಸಮಸ್ಯೆ ಎದುರಿಸುತ್ತಿದ್ದು ಅಭಿಮಾನಿಗಳು ನೆರುವ ನೀಡಬೇಕು ಎಂದು ಅವರ ಸ್ನೇಹಿತೆ ನಟಿ ಗೋಪಿಕಾ ಅನಿಲ್ ಮನವಿ ಮಾಡಿದ್ದಾರೆ.