ಸಾರಾಂಶ
ಖ್ಯಾತ ಉದ್ಯಮಿ ಹಾಗೂ ಆಭರಣ ವ್ಯಾಪಾರಿ ಬಾಬಿ ಚೆಮ್ಮನೂರು ತಮಗೆ ಲೈಂಗಿಕ ಕಿರುಕಿಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಲಯಾಳಂ ನಟಿ ಹನಿ ರೋಸ್ ಪೊಲೀಸರಗೆ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75ರ ಅಡಿ ಪ್ರಕರಣ ದಾಖಲಾಗಿದೆ
ಕೊಚ್ಚಿ: ಖ್ಯಾತ ಉದ್ಯಮಿ ಹಾಗೂ ಆಭರಣ ವ್ಯಾಪಾರಿ ಬಾಬಿ ಚೆಮ್ಮನೂರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಲಯಾಳಂ ನಟಿ ಹನಿ ರೋಸ್ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75ರ ಅಡಿ ಪ್ರಕರಣ ದಾಖಲಾಗಿದೆ. ಆದರೆ, ತಮ್ಮ ಮೇಲಿನ ಆರೋಪಗಳನ್ನು ಚೆಮ್ಮನೂರು ಅಲ್ಲಗಳೆದಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರೋಸ್, ‘ನನ್ನ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಕ್ಕಾಗಿ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಇದೇ ಮನಸ್ಥಿತಿ ಹೊಂದಿರುವ ನಿಮ್ಮ ಬೆಂಬಲಿಗರ ಮೇಲೆಯೂ ಇದೇ ಕ್ರಮ ಕೈಗೊಳ್ಳುತ್ತೇನೆ. ನೀವು ನಿಮ್ಮ ಸಂಪತ್ತಿನ ಮೇಲೆ ಅವಲಂಬಿತರಾಗಿರಬಹುದು. ಆದರೆ ನನಗೆ ಭಾರತದ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆಯಿದೆ’ ಎಂದು ಹೇಳಿದ್ದಾರೆ.