ಇತ್ತೀಚೆಗೆ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ನಟಿ ಶ್ರೀ ಲೇಖಾ ಮಿತ್ರಾ ಕೊಚ್ಚಿ ಪೊಲೀಸ್ ಆಯುಕ್ತರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.

ಕೊಚ್ಚಿ: ಇತ್ತೀಚೆಗೆ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ನಟಿ ಶ್ರೀಲೇಖಾ ಮಿತ್ರಾ ಕೊಚ್ಚಿ ಪೊಲೀಸ್ ಆಯುಕ್ತರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಹೀಗಾಗಿ ರಂಜಿತ್‌ಗೆ ಬಂಧನ ಭೀತಿ ಆರಂಭವಾಗಿದೆ.

ರೇವತಿ ವಿರುದ್ಧ ಸಿದ್ದಿಕಿ ದೂರು: ತಮ್ಮ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ರೇವತಿ ಸಂಪತ್‌ ವಿರುದ್ಧ ನಟ ಸಿದ್ದಿಕಿ ದೂರು ಸಲ್ಲಿಸಿದ್ದಾರೆ. ರೇವತಿ ಆರೋಪವೆಲ್ಲ ಸುಳ್ಳು. ಹಾಗೂ ತೇಜೋವಧೆ ಉದ್ದೇಶ ಹೊಂದಿವೆ ಎಂದು ಸಿದ್ದಿಕಿ ಹೇಳಿದ್ದಾರೆ.

‘ಸಿದ್ದಿಕಿ ಅಂಕಲ್‌ ನನ್ನ ಮೇಲೆ ಹಲವು ಬಾರಿ ಬಲವಂತದ ಸಂಭೋಗ ಮಾಡಿದ್ದರು. ಸಹರಿಸದಿದ್ದರೆ ಸಿನಿಮಾದಲ್ಲಿ ಚಾನ್ಸ್‌ ಸಿಗಲ್ಲ ಎಂದಿದ್ದರು’ ಎಂದು ರೇವತಿ ಭಾನುವಾರ ಆರೋಪಿಸಿದ್ದರು.