ಸಾರಾಂಶ
ಅದಾನಿ ಸಮೂಹವು ಸೌರವಿದ್ಯುತ್ ಡೀಲ್ ಕುದುರಿಸಲು ಆಂಧ್ರಪ್ರದೇಶ ಹಿರಿಯ ಅಧಿಕಾರಿಯೊಬ್ಬರಿಗೆ 1750 ಕೋಟಿ ರು. ಲಂಚ ನೀಡಿತ್ತು ಎಂದು ಅಮೆರಿಕ ಸರ್ಕಾರದ ಗಂಭೀರದ ಆರೋಪದ ಬೆನ್ನಲ್ಲೇ, ಅದಾನಿ ಜೊತೆಗಿನ ವಿದ್ಯುತ್ ಖರೀದಿ ಒಪ್ಪಂದ ರದ್ದುಪಡಿಸುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಆಂಧ್ರಪ್ರದೇಶ ಸರ್ಕಾರ ಹೇಳಿದೆ.
ಅಮರಾವತಿ: ಅದಾನಿ ಸಮೂಹವು ಸೌರವಿದ್ಯುತ್ ಡೀಲ್ ಕುದುರಿಸಲು ಆಂಧ್ರಪ್ರದೇಶ ಹಿರಿಯ ಅಧಿಕಾರಿಯೊಬ್ಬರಿಗೆ 1750 ಕೋಟಿ ರು. ಲಂಚ ನೀಡಿತ್ತು ಎಂದು ಅಮೆರಿಕ ಸರ್ಕಾರದ ಗಂಭೀರದ ಆರೋಪದ ಬೆನ್ನಲ್ಲೇ, ಅದಾನಿ ಜೊತೆಗಿನ ವಿದ್ಯುತ್ ಖರೀದಿ ಒಪ್ಪಂದ ರದ್ದುಪಡಿಸುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಆಂಧ್ರಪ್ರದೇಶ ಸರ್ಕಾರ ಹೇಳಿದೆ.
ಈ ಕುರಿತು ರಾಯಿಟರ್ಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಆಂಧ್ರದ ಇಂಧನ ಖಾತೆ ಸಚಿವ ಪಿ.ಕೇಶವ ರಾವ್, ‘ಅಮೆರಿಕದ ನ್ಯಾಯಾಲಯದಲ್ಲಿ ಅದಾನಿ ಸಮೂಹದ ವಿರುದ್ಧ ಲಂಚ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ, ಹಿಂದಿನ ಸಿಎಂ ಜಗನ್ ಅವಧಿಯಲ್ಲಿ ಮಾಡಿಕೊಂಡ ವಿದ್ಯುತ್ ಖರೀದಿ ಒಪ್ಪಂದ ಕುರಿತ ಎಲ್ಲಾ ದಾಖಲೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಪರಿಶೀಲನೆ ಬಳಿಕ ಒಪ್ಪಂದ ರದ್ದು ಸೇರಿದಂತೆ ನಮ್ಮ ಮುಂದೆ ಏನೆಲ್ಲಾ ಅವಕಾಶ ಇದೆ ಎಂಬುದನ್ನು ನೋಡುತ್ತೇವೆ’ ಎಂದು ಹೇಳಿದ್ದಾರೆ.ಅದಾನಿ ಸಮೂಹವು ದುಬಾರಿ ದರಕ್ಕೆ 7 ಗಿಗಾವ್ಯಾಟ್‌ನಷ್ಟು ವಿದ್ಯುತ್ ಖರೀದಿ ಒಪ್ಪಂದ ಖರೀದಿಸಲು ಆಂಧ್ರದ ಹಿರಿಯ ಅಧಿಕಾರಿಯೊಬ್ಬರಿಗೆ 1750 ಕೋಟಿ ರು.ನಷ್ಟು ಲಂಚ ನೀಡಿದೆ ಎಂದು ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.