ಸಾರಾಂಶ
ಭಾರತದ ಮೊದಲ ಬಾಹ್ಯಾಕಾಶ ಸೌರ ಯೋಜನೆಯಾದ ಆದಿತ್ಯ ಎಲ್-1 ನೌಕೆಯಲ್ಲಿರುವ ಪೇಲೋಡ್ ಎಸ್‌ಯುಐಟಿ ಇದೇ ಮೊದಲ ಬಾರಿಗೆ ಸೂರ್ಯನ ಸಂಪೂರ್ಣ ಫೋಟೋವನ್ನು ತೆಗೆದಿದೆ. ಈ ಫೋಟೋವನ್ನು ಶುಕ್ರವಾರ ಹಂಚಿಕೊಂಡಿರುವ ಇಸ್ರೋ ಇದು ಸೂರ್ಯನ ಅಧ್ಯಯನದಲ್ಲಿ ಮತ್ತೊಂದು ಮೈಲುಗಲ್ಲು ಎಂದು ಹೇಳಿದೆ.
ವಿವಿಧ ತರಂಗಾಂತರದಲ್ಲಿ ಅತಿ ನೇರಳೆ ಕಿರಣ ಸಹಾಯದಿಂದ ಫೋಟೋ
ಡಿ.6ರಂದು ತೆಗೆದ ಫೊಟೋವನ್ನು ಬಿಡುಗಡೆ ಮಾಡಿದ ಇಸ್ರೋನವದೆಹಲಿ: ಭಾರತದ ಮೊದಲ ಬಾಹ್ಯಾಕಾಶ ಸೌರ ಯೋಜನೆಯಾದ ಆದಿತ್ಯ ಎಲ್-1 ನೌಕೆಯಲ್ಲಿರುವ ಪೇಲೋಡ್ ಎಸ್‌ಯುಐಟಿ ಇದೇ ಮೊದಲ ಬಾರಿಗೆ ಸೂರ್ಯನ ಸಂಪೂರ್ಣ ಫೋಟೋವನ್ನು ತೆಗೆದಿದೆ. ಈ ಫೋಟೋವನ್ನು ಶುಕ್ರವಾರ ಹಂಚಿಕೊಂಡಿರುವ ಇಸ್ರೋ ಇದು ಸೂರ್ಯನ ಅಧ್ಯಯನದಲ್ಲಿ ಮತ್ತೊಂದು ಮೈಲುಗಲ್ಲು ಎಂದು ಹೇಳಿದೆ. ಆದಿತ್ಯ ಎಲ್-1 ನೌಕೆಯಲ್ಲಿರುವ ಸೋಲಾರ್ ಅಲ್ಟ್ರಾವಯಲೆಟ್ ಇಮೇಜಿಂಗ್ ಟೆಲಿಸ್ಕೋಪ್ (ಎಸ್‌ಯುಐಟಿ) ಮೊದಲ ಬಾರಿಗೆ ಸೂರ್ಯನಿಂದ ಹೊರಹೊಮ್ಮುವ ಅತಿ ನೇರಳೆ ಕಿರಣಗಳನ್ನು ಆಧರಿಸಿ ವಿವಿಧ ತರಂಗಾಂತರಗಳಲ್ಲಿ ಸೂರ್ಯನ ಫೋಟೋವನ್ನು ತೆಗೆದಿದೆ. ಈ ಫೋಟೋಗಳನ್ನು 200ರಿಂದ 400 ನ್ಯಾನೋ ಮೀ. ತರಂಗಾಂತರಗಳಲ್ಲಿ ತೆಗೆಯಲಾಗಿದೆ.ಇದು ಸೂರ್ಯನ ಮೇಲ್ಮೈಯಾದಂತಹ ಫೋಟೋಸ್ಪಿಯರ್ ಮತ್ತು ಅದರ ಹೊರಭಾಗವಾಗಿರುವ ಕ್ರೋಮೋ ಸ್ಪಿಯರ್‌ಗಳನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ವಿವಿಧ ಸೌರ ಘಟನೆಗಳನ್ನು ಅರ್ಥ ಮಾಡಿಕೊಳ್ಳಲು ಈ ಪದರಗಳ ಅಧ್ಯಯನ ಮಾಡುವುದು ಅವಶ್ಯಕವಾಗಿದೆ ಎಂದು ಇಸ್ರೋ ಟ್ವೀಟ್‌ನಲ್ಲಿ ಹೇಳಿದೆ.ಎಸ್‌ಯುಐಟಿ ಪೇಲೋಡನ್ನು ಪುಣೆ ವಿವಿಯ 50 ಮಂದಿ ವಿಜ್ಞಾನಿಗಳು ಸಿದ್ಧಪಡಿಸಿದ್ದು, ಇದು ಅತಿ ನೇರಳೆ ಕಿರಣಗಳನ್ನು ಗುರುತಿಸುವ ಟೆಲಿಸ್ಕೋಪನ್ನು ಹೊಂದಿದೆ.