2022-23ರಲ್ಲಿ ಬಿಜೆಪಿಗೆ 2361 ಕೋಟಿ ರು. ಆದಾಯ: ನಂ.1

| Published : Feb 29 2024, 02:02 AM IST

ಸಾರಾಂಶ

2022-23ನೇ ಅವಧಿಯಲ್ಲಿ ಕಾಂಗ್ರೆಸ್‌ಗೆ 452 ಕೋಟಿ ರು. ಆದಾಯ ಸಂದಿರುವುದಾಗಿ ಎಡಿಆರ್‌ ವರದಿ ತಿಳಿಸಿದೆ.

ನವದೆಹಲಿ: 2022-23ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳು 3077 ಕೋಟಿ ರು. ಆದಾಯ ಪಡೆದುಕೊಂಡಿವೆ. ಇದರಲ್ಲಿ ಬಿಜೆಪಿಯ ಪಾಲು 2361 ಕೋಟಿ ರು. (ಶೇ.76.7) ಎಂದು ಎಡಿಆರ್‌ ವರದಿ ತಿಳಿಸಿದೆ. ಬಿಜೆಪಿ ಒಟ್ಟಾರೆ 2361 ಕೋಟಿ ರು. ಪಡೆದುಕೊಂಡಿದ್ದರೆ, ಕಾಂಗ್ರೆಸ್‌ 452.37 ಕೋಟಿ ರು.ನೊಂದಿಗೆ 2ನೇ ಸ್ಥಾನದಲ್ಲಿದೆ. ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿ, ಆಪ್‌, ಎನ್‌ಪಿಪಿ ಮತ್ತು ಸಿಪಿಎಂಗಳು ತಮ್ಮ ಆದಾಯವನ್ನು ಘೋಷಣೆ ಮಾಡಿಕೊಂಡಿವೆ. ಚುನಾವಣಾ ಬಾಂಡ್‌ಗಳಿಂದ ಬಿಜೆಪಿ 1294 ಕೋಟಿ ರು., ಕಾಂಗ್ರೆಸ್‌ 171 ಕೋಟಿ ರು., ಆಪ್‌ 45.45 ಕೋಟಿ ರು. ಗಳಿಸಿಕೊಂಡಿವೆ. 2021-22ನೇ ಸಾಲಿಗೆ ಹೋಲಿಸಿದರೆ ಬಿಜೆಪಿಯ ಆದಾಯ ಪ್ರಮಾಣ ಶೇ.23.15ರಷ್ಟು ಹೆಚ್ಚಳವಾಗಿದೆ ಎಂದು ಎಡಿಆರ್‌ ತಿಳಿಸಿದೆ. ಬಿಜೆಪಿ ತನ್ನ ಆದಾಯದಲ್ಲಿ 57.68 ಕೋಟಿ ರು.ಗಳನ್ನು ವೆಚ್ಚ ಮಾಡಿದ್ದು, ಕಾಂಗ್ರೆಸ್‌ 467 ಕೋಟಿ ರು. ವೆಚ್ಚ ಮಾಡಿದೆ. ಆಪ್‌ ಸಹ ಆದಾಯಕ್ಕಿಂತ ಹೆಚ್ಚು ವೆಚ್ಚ ಮಾಡಿದ್ದು, 102 ಕೋಟಿ ರು. ವೆಚ್ಚ ಮಾಡಿದೆ.