‘ಮದುವೆಯಾಗುವುದಕ್ಕೆ ಕಾನೂನಿನಲ್ಲಿ ನಿಗದಿಪಡಿಸಿರುವ ವಯಸ್ಸು ತಲುಪದಿದ್ದರೂ ವಯಸ್ಕರು (18 ಮೀರಿದವರು) ಪರಸ್ಪರ ಒಪ್ಪಿಗೆ ಮೇರೆಗೆ ಸಹಜೀವನ (ಲಿವ್‌ ಇನ್‌ ) ಸಂಬಂಧದಲ್ಲಿರುವುದಕ್ಕೆ ಅರ್ಹರು’ ಎಂದು ರಾಜಸ್ಥಾನ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಜೈಪುರ: ‘ಮದುವೆಯಾಗುವುದಕ್ಕೆ ಕಾನೂನಿನಲ್ಲಿ ನಿಗದಿಪಡಿಸಿರುವ ವಯಸ್ಸು ತಲುಪದಿದ್ದರೂ ವಯಸ್ಕರು (18 ಮೀರಿದವರು) ಪರಸ್ಪರ ಒಪ್ಪಿಗೆ ಮೇರೆಗೆ ಸಹಜೀವನ (ಲಿವ್‌ ಇನ್‌ ) ಸಂಬಂಧದಲ್ಲಿರುವುದಕ್ಕೆ ಅರ್ಹರು’ ಎಂದು ರಾಜಸ್ಥಾನ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

‘ಪರಸ್ಪರ ಒಪ್ಪಿಗೆಯ ಮೇರೆಗೆ ನಾವಿಬ್ಬರೂ ಒಟ್ಟಿಗೆ ಇದ್ದೇವೆ. ನಮಗೆ ರಕ್ಷಣೆ ನೀಡಬೇಕು’ ಎಂದು ಕೋರಿ ಕೋಟಾದ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ತಮಗೆ ಯುವತಿ ಕುಟುಂಬಸ್ಥರಿಂದ ಇದಕ್ಕೆ ವಿರೋಧವಿದ್ದು, ಕೊಲೆ ಬೆದರಿಕೆಯಿದೆ ಎಂದು ಅಳಲು ತೋಡಿಕೊಂಡಿದ್ದರು.ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ‘ಯುವಕನಿಗೆ ಮದುವೆ ಆಗುವುದಕ್ಕೆ ನಿಗದಿಪಡಿಸಿರುವ 21 ವರ್ಷ ಆಗಿಲ್ಲ. ಹಾಗಾಗಿ ಸಹಜೀವನಕ್ಕೆ ಅನುಮತಿ ನೀಡಬಾರದು’ ಎಂದು ವಾದಿಸಿದ್ದರು. ವಾದ ಆಲಿಸಿದ ನ್ಯಾ. ಅನೂಪ್‌ ಧಂಡ್ ಅವರು , ‘ಜೋಡಿಗಳ ಸಂವಿಧಾನದ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಜೀವನ ಮತ್ತು ಸ್ವಾತಂತ್ರ್ಯವನ್ನು ಕಾಪಾಡಬೇಕು. ದೇಶದ ಕಾನೂನಿನಲ್ಲಿ ಲಿವ್‌ ಇನ್‌ ಸಂಬಂಧ ನಿಷೇಧಿಸಿಲ್ಲ. ವಯಸ್ಕರಾಗಿದ್ದರೆ ಆ ಸಂಬಂಧದಲ್ಲಿ ಇರಲು ಅರ್ಹರು’ ಎಂದು ಅಭಿಪ್ರಾಯ ಪಟ್ಟಿದೆ.