ಅನಂತ್‌, ಮಹಾಜನ್, ಉಮಾ, ಸುಷ್ಮಾರನ್ನು ಬೆಳೆಸಿದ ಧೀಮಂತ

| Published : Feb 04 2024, 01:32 AM IST / Updated: Feb 04 2024, 11:40 AM IST

ಸಾರಾಂಶ

ಬಿಜೆಪಿಯಲ್ಲಿ ಮುಂಚೂಣಿ ನಾಯಕರಾದ ಅನಂತಕುಮಾರ್‌, ಪ್ರಮೋದ್‌ ಮಹಾಜನ್‌, ಉಮಾಭಾರತಿ, ಸುಷ್ಮಾ ಸ್ವರಾಜ್‌ ಅವರಿಗೆ ಸಂಘಟನೆ ಮಾಡಲು ತಿಳಿಸಿ ಪಕ್ಷದಲ್ಲಿ ಮಹತ್ವದ ಹುದ್ದೆ ನೀಡಿ ಜನನಾಯಕರಾಗಿ ಬೆಳೆಸಿದ ಖ್ಯಾತಿ ಅಡ್ವಾಣಿಗೆ ಸಲ್ಲುತ್ತದೆ.

ಬಿಜೆಪಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ, ಕೇಂದ್ರ ಸಚಿವರಾಗಿ ಗಮನ ಸೆಳೆದಿದ್ದ ಕನ್ನಡಿಗ ಅನಂತ್‌ಕುಮಾರ್‌, ಪ್ರಮೋದ್‌ ಮಹಾಜನ್‌, ಉಮಾ ಭಾರತಿ, ಸುಷ್ಮಾ ಸ್ವರಾಜ್, ಅರುಣ್‌ ಜೇಟ್ಲಿ ಮೊದಲಾದ ಕಿರಿಯ ನಾಯಕರನ್ನು ಪಕ್ಷದ ಮುಂಚೂಣಿ ನಾಯಕರಾಗಿ ಬೆಳೆಸುವಲ್ಲಿ ಅಡ್ವಾಣಿ ಅವರ ಪಾತ್ರ ಪ್ರಮುಖವಾದುದು.

ಜನಸಂಘದ ದಿನಗಳಿಂದ ಹಿಡಿದು ನಂತರ ಪಕ್ಷದ ಅಧ್ಯಕ್ಷರಾಗಿದ್ದ ವೇಳೆ, ಬಳಿಕ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ, ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸಿದ ಅವಧಿಯವರೆಗೂ ಮೇಲ್ಕಂಡ ನಾಯಕರನ್ನು ತಿದ್ದಿ ತೀಡಿ ಆರೈಕೆ ಮಾಡಿದ್ದು ಅಡ್ವಾಣಿ ಹಿರಿಮೆ.